Diabetes Diet: ಮಧುಮೇಹಿಗಳ ಡಯಟ್ನಲ್ಲಿರಲಿ ಈ ನಾಲ್ಕು ಆಹಾರ
ಮಧುಮೇಹಿಗಳು ತಮ್ಮ ದಿನನಿತ್ಯದ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಇತರ ಅನೇಕ ರೋಗಗಳ ಅಪಾಯ ಹೆಚ್ಚಾಗಬಹುದು.
ಡ್ರಮ್ ಸ್ಟಿಕ್: ಸೌತ್ ಇಂಡಿಯನ್ ಖಾದ್ಯವಾದ ಸಾಂಬಾರ್ ಅಡುಗೆಯಲ್ಲಿ ಡ್ರಮ್ ಸ್ಟಿಕ್ ಅಂದರೆ ನುಗ್ಗೆ ಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ನುಗ್ಗೆ ಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯೇ. ಇದು ಚಯಾಪಚಯವನ್ನು ಬಲಪಡಿಸುತ್ತದೆ.
ಬಾಳೆ ಕಾಯಿ: ಮಧುಮೇಹಿಗಳು ಆರೋಗ್ಯವಾಗಿರಬೇಕೆಂದರೆ ನಿಮ್ಮ ಡಯಟ್ ನಲ್ಲಿ ಬಾಳೆಕಾಯಿಯನ್ನು ತಪ್ಪದೇ ಸೇರಿಸಿ. ಅದರಲ್ಲಿ ಸಕ್ಕರೆ ಅಂಶವು ತುಂಬಾ ಕಡಿಮೆಯಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಾಗಿದೆ, ಇದರೊಂದಿಗೆ ಉದರ ಸಂಬಂಧಿತ ಸಮಸ್ಯೆಗಳಿಂದಲೂ ದೂರ ಉಳಿಯಬಹುದು.
ನೆಲ್ಲಿ ಕಾಯಿ: ಆಮ್ಲಾವನ್ನು ಅಂದರೆ ನೆಲ್ಲಿ ಕಾಯಿಯನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗಿದೆ, ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ರೂಪದಲ್ಲಿ ಸೇವಿಸಿದರೆ, ಮಧುಮೇಹ ರೋಗಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಹಾಗಲಕಾಯಿ: ಇದು ಕಹಿ ತರಕಾರಿಯಾದರೂ ಇದರ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿರುತ್ತದೆ. ಮಧುಮೇಹಿಗಳು ಹಾಗಲಕಾಯಿಯ ರಸವನ್ನು ನಿಯಮಿತವಾಗಿ ಸೇವಿಸಿದರೆ ಅವರ ರಕ್ತದಲ್ಲಿನ ಸಕ್ಕರೆಯು ಕಡಿಮೆಯಾಗುವುದು, ಜೊತೆಗೆ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.