ಮನೆಯಂಗಳದಲ್ಲೇ ಇರುವ ಈ ಪುಟ್ಟ ಗಿಡದ ಎಲೆಯನ್ನು ಸೇವಿಸಿದ ನಿಮಿಷಗಳಲ್ಲಿ ನಾರ್ಮಲ್ ಆಗುವುದು ಬ್ಲಡ್ ಶುಗರ್! ಒಮ್ಮೆ ಟ್ರೈ ಮಾಡಿ ನೋಡಿ
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಮನೆಯಿಂದ ನಕಾರಾತ್ಮಕತೆ ದೂರವಾಗುತ್ತದೆ. ಆದರೆ ತುಳಸಿಗೆ ಕೇವಲ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲದೆ, ಆಯುರ್ವೇದದಲ್ಲೂ ಪ್ರಮುಖವೆಂದು ಪರಿಗಣಿಸಲಾಗಿದೆ.
ತುಳಸಿ ಎಲೆಗಳಲ್ಲಿ ಅನೇಕ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಸೆಪ್ಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇದು ವ್ಯಕ್ತಿಯನ್ನು ಆಮ್ಲೀಯತೆ, ಶೀತ ಮತ್ತು ಜೀರ್ಣಕಾರಿ ಸಮಸ್ಯೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿಯುವುದರಿಂದ ಯಾವ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಹವಾಮಾನದಲ್ಲಿನ ಬದಲಾವಣೆಯ ಮೊದಲ ಪರಿಣಾಮವು ವ್ಯಕ್ತಿಯ ಪ್ರತಿರಕ್ಷೆಯ ಮೇಲೆ ಇರುತ್ತದೆ. ಈ ಋತುವಿನಲ್ಲಿ ಹೆಚ್ಚಿನ ಜನರು ಶೀತ ಮತ್ತು ಕೆಮ್ಮಿಗೆ ತುತ್ತಾಗುತ್ತಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ಸ್ವಲ್ಪ ಹೊತ್ತು ಜಗಿದು ತಿನ್ನಿ.
ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ತುಳಸಿ ಎಲೆಗಳನ್ನು ಸೇವಿಸಬಹುದು. ತುಳಸಿ ಎಲೆಗಳನ್ನು ಜಗಿಯುವುದರಿಂದ ಆಮ್ಲೀಯತೆ, ಗ್ಯಾಸ್, ಮಲಬದ್ಧತೆ ಮತ್ತು ಹೊಟ್ಟೆ ಉರಿಯುವಿಕೆಯಿಂದ ಪರಿಹಾರ ದೊರೆಯುತ್ತದೆ.
ತುಳಸಿ ಎಲೆಗಳನ್ನು ಸೇವಿಸುವುದರಿಂದ ತಲೆನೋವಿನಿಂದ ಮುಕ್ತಿ ದೊರೆಯುತ್ತದೆ. ಲೆನೋವಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳಿಗೆ ಶುಂಠಿಯ ರಸವನ್ನು ಬೆರೆಸಿ ಹಣೆಗೆ ಹಚ್ಚಿಡಿ. ಈ ಪರಿಹಾರವನ್ನು ಅನುಸರಿಸುವ ಮೂಲಕ ಸ್ವಲ್ಪ ಸಮಯದೊಳಗೆ ತಲೆನೋವಿನಿಂದ ಮುಕ್ತರಾಗುತ್ತೀರಿ.
ಒತ್ತಡವನ್ನು ಕಡಿಮೆ ಮಾಡಲು ತುಳಸಿ ಎಲೆಗಳನ್ನು ಸಹ ಸೇವಿಸಬಹುದು. ತುಳಸಿ ಎಲೆಗಳಲ್ಲಿರುವ ಅಡಾಪ್ಟೋಜೆನ್ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳನ್ನು ಸೇವಿಸಬಹುದು. ತುಳಸಿ ಎಲೆಗಳು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಮಧುಮೇಹ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ತುಳಸಿ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ಜಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆಯಾಗುವುದಲ್ಲದೆ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.