ಮಧುಮೇಹಿಗಳು ಚೂಯಿಂಗ್ ಗಮ್ ಥರ ಈ ಒಣಹಣ್ಣನ್ನು ಜಗಿತಾ ಇರಿ.. ಎಂದೂ ಹೆಚ್ಚಾಗಲ್ಲ ಬ್ಲಡ್ ಶುಗರ್! ನಾರ್ಮಲ್ ಆಗೇ ಇರುತ್ತೆ!
)
ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳಿಂದಾಗಿ ಭಾರತವನ್ನು ಸಾಮಾನ್ಯವಾಗಿ 'ಡಯಾಬಿಟಿಸ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್' ಎಂದು ಕರೆಯಲಾಗುತ್ತದೆ. ಏಕೆಂದರೆ ವಿಶ್ವದ ಒಟ್ಟು ಮಧುಮೇಹ ರೋಗಿಗಳಲ್ಲಿ ಭಾರತವು 17% ರಷ್ಟಿದೆ. ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಜನರು ಅನೇಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು.
)
ಇದು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಇದನ್ನು ಔಷಧಿಗಳ ಸಹಾಯದಿಂದ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳ ಸಹಾಯದಿಂದ ನಿಯಂತ್ರಿಸಬಹುದು. ಸಾಮಾನ್ಯವಾಗಿ, ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಅಂದಹಾಗೆ ನಾವಿಂದು, ಮಧುಮೇಹದಲ್ಲಿ ಯಾವುದೇ ಭಯವಿಲ್ಲದೆ ತಿನ್ನಬಹುದಾದ ಕೆಲವು ಒಣ ಹಣ್ಣುಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
)
ಮಧುಮೇಹಿಗಳಾಗಿದ್ದರೆ, ಪ್ರತಿದಿನ ಡ್ರೈ ಪ್ಲಮ್ ಅನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕರಗುವ ಫೈಬರ್ ಮತ್ತು ವಿಟಮಿನ್ ಸಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಯಮಿತವಾಗಿ ಎರಡು ತುಂಡುಗಳನ್ನು ತಿನ್ನಬಹುದು.
ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿ ಮಧುಮೇಹಕ್ಕೆ ಅಗ್ಗದ ಚಿಕಿತ್ಸೆಯಾಗಿದೆ. ಇದನ್ನು ಹಲವು ವಿಧಗಳಲ್ಲಿ ಆಹಾರದ ಭಾಗವಾಗಿ ಮಾಡಬಹುದು.
ಮಧುಮೇಹಿಗಳಾಗಿದ್ದರೆ ಮತ್ತು ಕಡಿಮೆ ಸಕ್ಕರೆಯ ಅಂಶವುಳ್ಳ ಒಣ ಹಣ್ಣುಗಳನ್ನು ಹುಡುಕುತ್ತಿದ್ದರೆ, ನಿಮಗೆ ಇದು ಬೆಸ್ಟ್ ಆಯ್ಕೆ. ಸ್ವತಂತ್ರ ರಾಡಿಕಲ್ಗಳಿಂದ ಜೀವಕೋಶಗಳನ್ನು ರಕ್ಷಿಸಲು ಪ್ರಮುಖ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.
ಅಧ್ಯಯನಗಳ ಪ್ರಕಾರ, ಗೋಡಂಬಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ವಿರೋಧಿ ಗುಣಗಳನ್ನು ಒದಗಿಸುತ್ತದೆ.
ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 6, ಮೆಗ್ನೀಸಿಯಮ್ ಮತ್ತು ಕಬ್ಬಿಣವು ಡ್ರೈ ಫಿಗ್ಸ್’ನಲ್ಲಿ ಕಂಡುಬರುತ್ತದೆ. ಅಲ್ಲದೆ, ಕರಗುವ ಫೈಬರ್’ನಲ್ಲಿ ಸಮೃದ್ಧವಾಗಿರುವ ಇದು ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರದಿಂದಲೂ ಪರಿಹಾರವನ್ನು ನೀಡುತ್ತದೆ.
ಬಾದಾಮಿಯನ್ನು ಊಟದ ನಂತರ ಅಥವಾ ಬೆಳಿಗ್ಗೆ ದಿನದ ಆರಂಭದಲ್ಲಿ ತಿನ್ನುವುದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಬಾದಾಮಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಿಸ್ತಾವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಂದಹಾಗೆ ಮಧುಮೇಹಿಗಳಿಗೆ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೀಗಿರುವಾಗ ಪಿಸ್ತಾಗಳ ಸಹಾಯದಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಡ್ರೈ ಮಲ್ಬೆರಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಮೆಗ್ನೀಸಿಯಮ್, ವಿಟಮಿನ್ ಬಿ, ಕಬ್ಬಿಣ ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. ಆದ್ದರಿಂದ, ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)