ಮಲಗುವಾಗ ದಿಂಬಿನ ಬಳಿ ಈ ವಸ್ತು ಇಟ್ಟರೆ ಬೆಳಗಾಗುವಷ್ಟರಲ್ಲಿ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌! ಮಧುಮೇಹಿಗಳಿಗೆ ಇದರ ಪರಿಮಳವೇ ಅಮೃತವಿದ್ದಂತೆ...

Sun, 01 Sep 2024-7:26 pm,

ಬೆಳ್ಳುಳ್ಳಿಯನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಇದಲ್ಲದೆ, ಬೆಳ್ಳುಳ್ಳಿ ಅನೇಕ ಗಂಭೀರ ಕಾಯಿಲೆಗಳನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದರಲ್ಲಿ ಆಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ

ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಕ್ಯಾಲ್ಸಿಯಂ, ತಾಮ್ರದಂತಹ ಅನೇಕ ಪೋಷಕಾಂಶಗಳು ಹೇರಳವಾಗಿವೆ. ಬೆಳ್ಳುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ಮಧುಮೇಹ ರೋಗಿಗಳಿಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಗುಣಗಳು ಈ ರೋಗಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ.  ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಲು ಬೆಳ್ಳುಳ್ಳಿಯನ್ನು ಯಾವ ವಿಧಾನಗಳಲ್ಲಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

 

ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಹಸಿ ಬೆಳ್ಳುಳ್ಳಿ ರಾಮಬಾಣವಿದ್ದಂತೆ. ಆರೋಗ್ಯ ತಜ್ಞರ ಪ್ರಕಾರ, ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಇದು ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಇದರಲ್ಲಿ ಕಂಡುಬರುವ ಅಲಿಸಿನ್ ಸಂಯುಕ್ತವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

ಇನ್ನು ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬೆಳ್ಳುಳ್ಳಿ ಕಷಾಯ ಸಹಾಯಕ. ಇದಲ್ಲದಿದ್ದರೆ ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಡುಗೆ ಈ ಎಣ್ಣೆಯನ್ನು ಬಳಸಬಹುದು, ಇಲ್ಲವೇ ಸಲಾಡ್‌ಗಳಲ್ಲಿಯೂ ಬಳಸಿ ಸೇವಿಸಬಹುದು.

 

ಇನ್ನೊಂದು ವಿಧಾನವೆಂದರೆ, ಬೆಳ್ಳುಳ್ಳಿಯನ್ನು ತಲೆದಿಂಬಿನ ಬಳಿ ಇಟ್ಟುಕೊಳ್ಳುವುದು. ಇದು ತೀರಾ ಅಪರೂಪದ ಉಪಾಯವಾಗಿದ್ದರೂ ಹಳ್ಳಿಗಳಲ್ಲಿ ಬಳಕೆ ಮಾಡುವ ಒಂದು ವಿಧಾನವಾಗಿದೆ.  ಮಧುಮೇಹಿಗಳು ಬೆಳ್ಳುಳ್ಳಿಯ ವಿಶೇಷವಾದ ಆರೋಮಾವನ್ನು ತೆಗೆದುಕೊಳ್ಳುತ್ತಿದ್ದರೆ, ದೇಹದಲ್ಲಿ ರಕ್ತಪರಿಚಲನೆ ಸುಧಾರಿಸುತ್ತದೆ. ಜೊತೆಗೆ ಇದು ಸಕ್ಕರೆ ಮಟ್ಟವನ್ನು ನಾರ್ಮಲ್‌ ಇರಿಸಲು ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಮಲಗುವಾಗ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಪಕ್ಕದಲ್ಲಿಟ್ಟರೆ, ಅದರ ಪರಿಮಳವನ್ನು ರಾತ್ರಿಪೂರ್ತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಈ ವಿಧಾನದಿಂದ ಸುಲಭವಾಗಿ ಮಧುಮೇಹ ನಿಯಂತ್ರಣದಲ್ಲಿಡಬಹುದು.

 

ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ  ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link