ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ, ಈ ರೀತಿ ಬಳಸಿದರೆ ಬ್ಲಡ್ ಶುಗರ್ ಕಂಟ್ರೋಲ್ ಆಗೋದು ಖಚಿತ !
ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಔಷಧಿಯ ನಂತರವೂ, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಲಡ್ ಶುಗರ್ ನಿಯಂತ್ರಿಸಲು ನೀವು ದಾಲ್ಚಿನ್ನಿ ಬಳಸಬಹುದು.
ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ದಾಲ್ಚಿನ್ನಿ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನು ಹಲವು ವಿಧಗಳಲ್ಲಿ ಸೇವಿಸಬಹುದು.
ದಾಲ್ಚಿನ್ನಿಯನ್ನು ಪುಡಿಮಾಡಿ ಅದನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿಡಬಹುದು.
ಬ್ಲಡ್ ಶುಗರ್ ನಿಯಂತ್ರಿಸಲು ದಾಲ್ಚಿನ್ನಿ ನೀರನ್ನು ಕುಡಿಯಬಹುದು. ಇದಕ್ಕಾಗಿ ಮೂರು-ನಾಲ್ಕು ಚಮಚ ದಾಲ್ಚಿನ್ನಿ ಪುಡಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ, 20 ನಿಮಿಷಗಳ ಕಾಲ ಕುದಿಸಿ. ಈ ನೀರನ್ನು ಸೇವಿಸಿ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ದಾಲ್ಚಿನ್ನಿ ಚಹಾವನ್ನು ಸೇವಿಸಬಹುದು. ಇದಕ್ಕಾಗಿ ಒಂದು ಲೋಟ ನೀರಿಗೆ ಸಣ್ಣ ದಾಲ್ಚಿನ್ನಿ ಹಾಕಿ ಕುದಿಸಿ. ನೀರು ಬಿಸಿಯಾದ ನಂತರ ಗ್ರೀನ್ ಟೀ ಮಿಶ್ರಣ ಮಾಡಿ. ಕೊಂಚ ಬಿಸಿ ಮಾಡಿ, ಫಿಲ್ಟರ್ ಮಾಡಿ ಕುಡಿಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.