Diamond: ಈ ರಾಶಿಯವರ ಜೀವನವನ್ನೇ ಹಾಳು ಮಾಡುತ್ತೆ `ಡೈಮಂಡ್`, ವಜ್ರಧಾರಣೆ ಯಾರಿಗೆ ಶುಭ?

Thu, 06 Jan 2022-1:36 pm,

ಮೇಷ ರಾಶಿ: ವಜ್ರವನ್ನು ಧರಿಸುವುದರಿಂದ ಮೇಷ ರಾಶಿಯವರಿಗೆ ಜೀವನದಲ್ಲಿ ಅನೇಕ ತೊಂದರೆಗಳು ಉಂಟಾಗಬಹುದು. ಈ ಜನರು ವಜ್ರವನ್ನು ಧರಿಸಲು ಬಯಸಿದರೆ, ಅವರು ಮೊದಲು ತಜ್ಞರನ್ನು ಸಂಪರ್ಕಿಸಬೇಕು.

ಕರ್ಕಾಟಕ ರಾಶಿಯ ಜನರು ವಜ್ರವನ್ನು ಧರಿಸುವುದು ಶುಭವಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ಅವರು ತಜ್ಞರನ್ನು ಸಂಪರ್ಕಿಸಿದ ನಂತರ ವಜ್ರವನ್ನು ಧರಿಸಬಹುದು. 

ಸಿಂಹ ರಾಶಿ: ವಜ್ರವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಶುಕ್ರವನ್ನು ಸಿಂಹ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ರಾಶಿಯ ಜನರು ವಜ್ರವನ್ನು ಧರಿಸಬಾರದು. ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಮತ್ತು ವಜ್ರಕ್ಕೆ ಸಂಬಂಧಿಸಿದ ಗ್ರಹ ಶುಕ್ರ ಪರಸ್ಪರ ಶತ್ರುಗಲಾಗಿದ್ದು, ವಜ್ರವು ಈ ಜನರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ವಜ್ರವನ್ನು ಧರಿಸುವುದು ಅವರ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಧನು ರಾಶಿ: ವಜ್ರವನ್ನು ಧರಿಸುವುದು ಧನು ರಾಶಿಯವರಿಗೆ ಕೂಡ ಅಶುಭ. ವಜ್ರವನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳು ಉಂಟಾಗುತ್ತವೆ. 

ಮೀನ ರಾಶಿ: ಮೀನ ರಾಶಿಯವರಿಗೆ ಶುಕ್ರನೂ ಒಳ್ಳೆಯ ಫಲ ನೀಡುವುದಿಲ್ಲ. ಆದ್ದರಿಂದ, ಈ ಜನರು ವಜ್ರ ಧರಿಸುವುದರಿಂದ ತಾವೇ ತೊಂದರೆಗಳನ್ನು ಆಹ್ವಾನಿಸಿದಂತಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link