Sidharth Malhotra-Kiara Advani Wedding: ಗಣ್ಯರ ಇರುವಿಕೆಯನ್ನು ಮರೆತ ಸಿದ್ಧಾರ್ಥ್-ಕಿಯಾರಾ ಮಂಟಪದಲ್ಲಿ ಹೀಗೆ ಮಾಡೋದಾ?

Fri, 10 Feb 2023-5:55 pm,
Sidharth Malhotra-Kiara Advani

ಬಾಲಿವುಡ್ ನ ಸುಂದರವಾದ ಈ ಜೋಡಿಗಳು ಶೇರ್ ಷಾ ಸಿನಿಮಾದಲ್ಲಿ ನಟಿಸಿತ್ತು. ಈ ಸಿನಿಮಾ ವಿಕ್ರಮ್ ಭಾತ್ರ ಮತ್ತು ಡಿಂಪಲ್ ಅವರ ಪ್ರೇಮಕಥೆ ಮತ್ತು ಕಾರ್ಗಿಲ್ ಯುದ್ಧದ ಕಥೆಯನ್ನು ಆಧರಿಸಿತ್ತು. ಮೊದಲೇ ಪ್ರೇಮಜೋಡಿಯಾಗಿದ್ದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾರನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಿದ್ದರು. ಈ ಸಿನಿಮಾ ಸಖತ್ ಹಿಟ್ ಆಗಿತ್ತು.

Sidharth Malhotra-Kiara Advani

ಕಿಯಾರಾ ಗ್ರ್ಯಾಂಡ್ ಎಂಟ್ರಿಯ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ರಾಜಕುಮಾರಿಯಂತೆ ಮದುವೆ ಮಂಟಪಕ್ಕೆ ಕಿಯಾರ ಬರುವುದನ್ನು ಕಂಡರೆ, ಮನಸ್ಸು ಕುಣಿದಾಡುವುದು ಖಂಡಿತ.

Sidharth Malhotra-Kiara Advani

ಕಿಯಾರಾ ವೇದಿಕೆಯ ಮೇಲೆ ಬರುತ್ತಿರುವಾಗ 'ಶೇರ್ ಶಾ' ಚಿತ್ರದ ಹಾಡನ್ನು ಹಾಕಲಾಗಿದೆ. ಈ ಫೋಟೋಗಳಲ್ಲಿ ಕಿಯಾರಾ ಹೆಚ್ಚು ಸುಂದರವಾಗಿ ಕಾಣಿಸಿಕೊಂಡಿದ್ದಾಳೆ.

ಎದುರಿಗೆ ಬರುತ್ತಿರುವ ತನ್ನ ವಧುವನ್ನು ನೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹೃದಯ ಬಡಿತ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಿದ್ಧಾರ್ಥ್ ಅವರ ಈ ಚಿತ್ರವೇ ಸಾಕ್ಷಿಯಾಗಿದೆ.

ಕಿಯಾರಾ ಮತ್ತು ಸಿದ್ಧಾರ್ಥ್ ವೇದಿಕೆಗೆ ಬಂದ ತಕ್ಷಣ ಒಬ್ಬರನ್ನೊಬ್ಬರು ತಬ್ಬಿಕೊಂಡರು. ಇದಾದ ನಂತರ ಜೈಮಾಲ ಸಮಾರಂಭ ಆರಂಭವಾಯಿತು.

ಇಬ್ಬರೂ ಒಬ್ಬರಿಗೊಬ್ಬರು ಹೂಮಾಲೆ ಹಾಕಿಕೊಂಡು ಬಹಿರಂಗವಾಗಿ ಚುಂಬಿಸುತ್ತಿದ್ದರು. ಇಬ್ಬರ ಚುಂಬನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಾದ ನಂತರ ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕೈಗಳನ್ನು ಹಿಡಿದು ನೃತ್ಯ ಮಾಡಿದ್ದಾರೆ. ಇಬ್ಬರೂ ಡ್ಯಾನ್ಸ್ ಮಾಡಿರುವ ಈ ಫೋಟೋ ನೋಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link