ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯೇ ಅಲ್ಲ...! ಹಾಗಾದ್ರೆ ಮತ್ಯಾವುದು? ಅಚ್ಛರಿಯ ಸಂಗತಿಗೆ ಇಲ್ಲಿದೆ ನೋಡಿ ಉತ್ತರ

Sun, 11 Aug 2024-2:00 pm,

ಭಾರತ ಸರ್ಕಾರವು ರಾಷ್ಟ್ರದ ಗುರುತು ಮತ್ತು ಪರಂಪರೆಯನ್ನು ವ್ಯಾಖ್ಯಾನಿಸುವ ಹಲವಾರು ಅಂಶಗಳನ್ನು ದೇಶದ ಸಂಕೇತಗಳಾಗಿ ಆಯ್ಕೆ ಮಾಡಿದೆ.  ಉದಾಹರಣೆಗೆ, ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ, ನವಿಲು ರಾಷ್ಟ್ರೀಯ ಪಕ್ಷಿ ಮತ್ತು ಕಮಲ ರಾಷ್ಟ್ರೀಯ ಹೂವು. ಇದೆಲ್ಲವೂ ಸಾಮಾನ್ಯ ಜ್ಞಾನವಾಗಿದ್ದು ನಮಗೆಲ್ಲಾ ತಿಳಿದಿರುವ ಸಂಗತಿ.

 

ಅಂತೆಯೇ, ಭಾರತದ ರಾಷ್ಟ್ರೀಯ ಕ್ರೀಡೆಯ ಬಗ್ಗೆ ಕೇಳಿದಾಗ, ಭಾರತಕ್ಕೆ ತಂದುಕೊಟ್ಟಿರುವ ಅಭೂತಪೂರ್ವ ಯಶಸ್ಸು ಮತ್ತು ಗೌರವವನ್ನು ಗಣನೆಗೆ ತೆಗೆದುಕೊಂಡು ʼಹಾಕಿʼ ಎಂದು ಉತ್ತರ ನೀಡುತ್ತೇವೆ. ಆದರೆ ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ ಅಲ್ಲ.

 

ಎಂಟು ಚಿನ್ನ, ಒಂದು ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿರುವ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ʼನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. 1928 ರಿಂದ 1956 ರವರೆಗಿನ ಸುವರ್ಣ ವರ್ಷಗಳಲ್ಲಿ ಸತತ ಆರು ಚಿನ್ನದ ಪದಕಗಳನ್ನು ಗೆದ್ದಿದೆ ಭಾರತೀಯ ಹಾಕಿ ತಂಡ.

 

ಲೆಜೆಂಡರಿ ಧ್ಯಾನ್ ಚಂದ್, ಬಲ್ಬೀರ್ ಸಿಂಗ್ ಸೀನಿಯರ್ ಮತ್ತು ಧನರಾಜ್ ಪಿಳ್ಳೈ ಸೇರಿದಂತೆ ವಿಶ್ವದ ಕೆಲವು ಅತ್ಯುತ್ತಮ ಫೀಲ್ಡ್ ಹಾಕಿ ಆಟಗಾರರನ್ನು ಭಾರತ ನಿರ್ಮಿಸಿದೆ..

 

ಇನ್ನು ಹಾಕಿಯಂತೆ, ಭಾರತೀಯ ಕಬಡ್ಡಿ ತಂಡವು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ, ಇಲ್ಲಿಯವರೆಗಿನ ಎಲ್ಲಾ ವಿಶ್ವಕಪ್ ಈವೆಂಟ್‌ʼಗಳನ್ನು ಗೆದ್ದಿರುವ ಕಬಡ್ಡಿ ತಂಡ ಏಷ್ಯನ್ ಗೇಮ್ಸ್‌ʼನಲ್ಲಿ 11 ಚಿನ್ನದ ಪದಕಗಳನ್ನು ಗೆದ್ದಿದೆ.

 

2020 ರಲ್ಲಿ, ಮಹಾರಾಷ್ಟ್ರ ರಾಜ್ಯದ ಧುಲೆ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಸರ್ಕಾರಕ್ಕೆ ಮಾಹಿತಿ ಹಕ್ಕು (ಆರ್‌ಟಿಐ) ಪ್ರಶ್ನೆಯನ್ನು ಸಲ್ಲಿಸಿದರು. ಹಾಕಿಯನ್ನು ಭಾರತದ ರಾಷ್ಟ್ರೀಯ ಆಟ ಎಂದು ಯಾವಾಗ ಘೋಷಿಸಲಾಯಿತು ಎಂದು ತಿಳಿಸಿ ಎಂದು ಮನವಿ ಮಾಡಿದ್ದರು. ಆ ಪ್ರಶ್ನೆಗೆ ಉತ್ತರಿಸಿದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ,  "ಸರ್ಕಾರವು ಯಾವುದೇ ಕ್ರೀಡೆ/ಆಟವನ್ನು ದೇಶದ ರಾಷ್ಟ್ರೀಯ ಆಟ ಎಂದು ಘೋಷಿಸಿಲ್ಲ. ಏಕೆಂದರೆ ಎಲ್ಲಾ ಜನಪ್ರಿಯ ಕ್ರೀಡಾ ವಿಭಾಗಗಳನ್ನು ಪ್ರೋತ್ಸಾಹಿಸುವುದು/ಉತ್ತೇಜಿಸುವುದು ಸರ್ಕಾರದ ಉದ್ದೇಶವಾಗಿದೆ" ಎಂದು ಹೇಳಿತ್ತು.

 

ಇನ್ನು ಟೋಕಿಯೊ 2020 ಒಲಿಂಪಿಕ್ಸ್‌ʼನಲ್ಲಿ ಭಾರತದ ಅದ್ಭುತ ಪ್ರದರ್ಶನದ ನಂತರ, ಹಾಕಿಯನ್ನು ರಾಷ್ಟ್ರೀಯ ಆಟವೆಂದು ಘೋಷಿಸಲು ಅನೇಕ ಮನವಿಗಳು ಬಂದಿತ್ತು. ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದರು. ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಮಾಡಲು ಮತ್ತು ಅದರ ಹಿಂದಿನ ವೈಭವಕ್ಕೆ ಮರಳುವಂತೆ ಸಹಾಯ ಮಾಡಲು ಭಾರತ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ʼಗೆ ಒತ್ತಾಯಿಸಿದರು.

 

ಆದರೆ, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಮತ್ತು ಸರ್ಕಾರವು ಅಧಿಕೃತವಾಗಿ ಹಾಕಿ ಅಥವಾ ಇತರ ಯಾವುದೇ ಕ್ರೀಡೆಗೆ ಶೀರ್ಷಿಕೆಯನ್ನು ಗೊತ್ತುಪಡಿಸುವವರೆಗೆ, ಭಾರತವು ರಾಷ್ಟ್ರೀಯ ಆಟವನ್ನು ಹೊಂದಿರುವುದಿಲ್ಲ ಎಂದು ಆದೇಶ ಹೊರಡಿಸಿತು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link