ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!

Mon, 02 Sep 2024-8:24 am,

ದೇಶದಾತ್ಯಂತ ಅತಿದೊಡ್ಡ ನೆಟ್ವರ್ಕ್ ಹೊಂದಿರುವ ಭಾರತೀಯ ರೈಲ್ವೆ ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಆದರೆ, ಭಾರತೀಯ ರೈಲ್ವೇಯಲ್ಲಿ ಎಲ್ಲಾ ರೈಲುಗಳ ಬಣ್ಣ ಒಂದೇ ಆಗಿರುವುದಿಲ್ಲ. 

ಭಾರತೀಯ ರೈಲಿನಲ್ಲಿ ಕೆಲವು ರೈಲಿಗಳು ನೀಲಿ ಬಣ್ಣದಲ್ಲಿದ್ದಾರೆ, ಇನ್ನೂ ಕೆಲವು ಕೆಂಪು, ಕೀಳವು ಹಸಿರು ಕೆಲವು ನೀಲಿ ಬಣ್ಣದಲ್ಲಿ ಇರುತ್ತವೆ. ಅಷ್ಟಕ್ಕೂ ಇವುಗಳ ನಡುವಿನ ವ್ಯತ್ಯಾಸವೇನು ಎಂದು ಎಂದಾದರೂ ಯೋಚಿಸಿದ್ದೀರಾ... 

ರೈಲಿನಲ್ಲಿ ಕೆಂಪು ಬಣ್ಣದ ಕೋಚ್ ಅನ್ನು ಲಿಂಕ್ ಹಾಫ್ಮನ್ ಬುಶ್ (LHB) ಎಂದು ಕರೆಯಲಾಗುತ್ತದೆ. ಜರ್ಮನಿಯಲ್ಲಿ ತಯಾರಿಸಲ್ಪಡುವ ಈ ವಿಶೇಷ ಕೋಚ್‌ಗಳನ್ನು ಭಾರತೀಯ ರೈಲ್ವೆ 2000ನೇ ಇಸವಿಯಲ್ಲಿ ಆಮದು ಮಾಡಿಕೊಂಡಿತು. ಸದ್ಯ  ಇವುಗಳನ್ನು ಪಂಜಾಬ್‌ನ ಕಪುರ್ತಲಾದಲ್ಲಿ ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ಹೆಚ್ಚಾಗಿ ಶತಾಬ್ದಿ, ರಾಜಧಾನಿಯಂತಹ ಸೂಪರ್‌ಫಾಸ್ಟ್‌ ರೈಲುಗಳಲ್ಲಿ ಬಳಸಲಾಗುತ್ತದೆ. ತೂಕದಲ್ಲಿ ಕಡಿಮೆ ಇರುವ ಈ ರೈಲುಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ರೈಲಿನ ನೀಲಿ ಬಣ್ಣದ ಕೋಚ್‌ಗಳನ್ನು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಎಂದು ಕರೆಯಲಾಗುತ್ತದೆ. ಈ ರೈಲುಗಳ ವೇಗವು ಸಾಮಾನ್ಯವಾಗಿ ಗಂಟೆಗೆ 70 ರಿಂದ 140 ಕಿ.ಮೀ. ಇವು ಕಬ್ಬಿಣದಿಂದ ಮಾಡಿದ ಈ ಕೋಚ್‌ಗಳು ಏರ್ ಬ್ರೇಕ್‌ಗಳನ್ನು ಹೊಂದಿವೆ. ಹೀಗಾಗಿ, ಈ ರೈಲುಗ್ಲಾನ್ನು ಹೆಚ್ಚಾಗಿ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬಳಸಲಾಗುತ್ತದೆ. ತಮಿಳುನಾಡಿನ ಚೆನ್ನೈನಲ್ಲಿ ಇಂತಹ ರೈಲುಗಳನ್ನು ತಯಾರಿಸಲಾಗುತ್ತದೆ. 

ನೀಲಿ ಮತ್ತು ಕೆಂಪು ಬಣ್ಣಕ್ಕಿಂತ ತುಂಬಾ ವಿರಳವಾಗಿ ಕಾಣಸಿಗುವ ರೈಲುಗಳೆಂದರೆ ಹಸಿರು ಬಣ್ಣದ ಕೋಚ್‌ಗಳನ್ನು ಹೊಂದಿರುವ ಟ್ರೈನ್ಸ್. ಗರೀಬ್ ರಥವನ್ನು ಹೊರತುಪಡಿಸಿ, ಹೈಸ್ಪೀಡ್ ರೈಲುಗಳಲ್ಲಿಯೂ ಈ ಬಣ್ಣವನ್ನು ಬಳಸಲಾಗುತ್ತದೆ. ಸಣ್ಣ ರೈಲು ಮಾರ್ಗಗಳಲ್ಲಿ ಓಡುವ ಮೀಟರ್ ಗೇಜ್ ರೈಲುಗಳ ಕೋಚ್‌ಗಳಲ್ಲಿ ಈ ಬಣ್ಣವನ್ನು ಬಳಸಲಾಗುತ್ತದೆ. 

ದೇಶಾದ್ಯಂತ ಸರ್ವೇ ಸಾಮಾನ್ಯವಾಗಿ ಕಾಣಸಿಗುವ ರೈಲುಗಳು ಹಳದಿ ಬಣ್ಣದ ಕೋಚ್‌ಗಳನ್ನು ಹೊಂದಿವೆ. ಕೈಗೆಟುಕುವ ದರದಲ್ಲಿ ಪ್ರಯಾಣವನ್ನು ಕಲ್ಪಿಸುವ ಈ ರೈಲುಗಳು ಪ್ಯಾಸೆಂಜರ್ ರೈಲುಗಳು. ಇವುಗಳ ಕೋಚ್‌ಗಳಲ್ಲಿ ತೆರೆದ ಕಿಟಕಿಗಳನ್ನು ಕಾಣಬಹುದು. 

ಐಸಿಎಫ್ ಕೋಚ್ ಸಾಂಪ್ರದಾಯಿಕ ರೈಲ್ವೇ ಕೋಚ್ ಆಗಿದ್ದು, ಇದನ್ನು ಐಸಿಎಫ್ (ಇಂಟೆಗ್ರಲ್ ಕೋಚ್ ಫ್ಯಾಕ್ಟರಿ), ಪೆರಂಬೂರ್, ಚೆನ್ನೈ, ಭಾರತದ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. ಐಸಿಎಫ್ ಕೋಚ್‌ಗಳಲ್ಲಿ ಡೈನಮೋ ಅಳವಡಿಸಲಾಗಿದ್ದು, ಇದರಿಂದ ರೈಲಿನ ವೇಗ ಕಡಿಮೆಯಾಗಿರುತ್ತದೆ.  ಈ ರೈಲುಗಳಲ್ಲಿ ಸೆಂಟರ್ ಬಫರ್ ಕೂಲಿಂಗ್ ವ್ಯವಸ್ಥೆ ಇರುವುದರಿಂದ ಯಾವುದೇ ರೀತಿಯ ಅಪಘಾತದ ಸಂದರ್ಭದಲ್ಲಿ , ಐಸಿಎಫ್ ಕೋಚ್‌ಗಳು ಹೆಚ್ಚು ಸೇಫ್ ಎಂದು ಹೇಳಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇವು ಡ್ಯುಯಲ್ ಬಫರ್ ಹೊಂದಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link