Digital Hiring Apps - ನೀವೂ ನೌಕರಿಯ ಹುಡುಕಾಟದಲ್ಲಿರುವಿರಾ? ಇಲ್ಲಿವೆ ನಿಮಗಾಗಿ 5 Digital Hiring Apps

Sun, 31 Oct 2021-4:48 pm,

1. LinkedIN Recuiter - ಉದ್ಯೋಗಗಳಿಗಾಗಿ ಡಿಜಿಟಲ್ ನೇಮಕಾತಿ ಅಪ್ಲಿಕೇಶನ್‌ಗಳ ವಿಷಯಕ್ಕೆ ಬಂದರೆ, ಲಿಂಕ್ಡ್‌ಇನ್ ಹೆಸರು ಬಹುತೇಕ ಮುಂಚೂಣಿಯಲ್ಲಿದೆ.  ಇದೊಂದು ಅತ್ಯಂತ ಜನಪ್ರಿಯ ವೇದಿಕೆ, ಇಲ್ಲಿ ನಿಮ್ಮ ಪ್ರೊಫೈಲ್ ಅನ್ನು ರಚಿಸುವ ಮೂಲಕ, ಜನರೊಂದಿಗೆ 'ಸಂಪರ್ಕ'ಗಳನ್ನು ಮಾಡುವ ಮೂಲಕ ನೀವು ಸುಲಭವಾಗಿ ಕೆಲಸವನ್ನು ಹುಡುಕಬಹುದು.

2. Hirect - ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಹೈ ಗ್ರೋಥ್ ಸ್ಟಾರ್ಟ್ ಅಪ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದೊಂದು ಚಾಟ್-ಆಧಾರಿತ ನೇರ ನೇಮಕಾತಿ ಅಪ್ಲಿಕೇಶನ್ ಆಗಿದೆ. ಇದುವರೆಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸ್ಟಾರ್ಟಪ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ.

3. Naukri Recuiter - ಈ ಅಪ್ಲಿಕೇಶನ್‌ನ ಸಹಾಯದಿಂದ, ನೀವು ನಿಮಗಾಗಿ ಕೆಲಸವನ್ನು ಸುಲಭವಾಗಿ ಹುಡುಕಬಹುದು. ಈ ಅಪ್ಲಿಕೇಶನ್‌ನಲ್ಲಿ, ಕೆಲಸದ ಹುಡುಕಾಟ ನಡೆಸುವವರಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಕಾಲರ್ ಐಡಿ ವೈಶಿಷ್ಟ್ಯವನ್ನು ಒದಗಿಸಲಾಗಿದೆ, ಇದು ಕರೆಗಳನ್ನು ಸ್ವೀಕರಿಸುವ ಮತ್ತು ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

4. Monster - ಮಾನ್‌ಸ್ಟರ್‌ ಕೂಡ ಅತ್ಯಂತ ಜನಪ್ರೀಯ ನೌಕರಿ ಹುಡುಕಾಟದ ಆಪ ಗಳಲ್ಲಿ ಒಂದು. ನೀವು ನಿಮ್ಮ ರೆಸ್ಯೂಮ್ ಅನ್ನು ರಚಿಸಿ ಮಾನ್ಸ್ಟರ್ ನಲ್ಲಿ ಅಪ್‌ಲೋಡ್ ಮಾಡಬಹುದು ಮತ್ತು ನಂತರ ಕಂಪನಿಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಫಿಲ್ಟರ್ ಮಾಡಬಹುದು ಮತ್ತು ಅದನ್ನು ಓದಬಹುದು. ಅಲ್ಲದೆ, ಇಲ್ಲಿ ನೀವು ನಿಮ್ಮ ಸಂಪರ್ಕ ವಿವರಗಳನ್ನು ಸಹ ನೀಡಬಹುದು ಇದರಿಂದ ನೇಮಕಾತಿದಾರರು ನಿಮ್ಮೊಂದಿಗೆ ನೇರವಾಗಿ ಮಾತನಾಡಬಹುದು.

5. Workable - ಇದೊಂದು Android ಅಪ್ಲಿಕೇಶನ್ ಆಗಿದೆ ಮತ್ತು ವೈಯಕ್ತಿಕ ಪ್ರೊಫೈಲ್, ಸ್ಕೋರ್‌ಕಾರ್ಡ್, ಮೌಲ್ಯಮಾಪನ ಮತ್ತು ವರದಿಯಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಂದರ್ಶನವನ್ನು ಸಹ ನೀವು ನಿಗದಿಪಡಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link