ಟೀಸರ್‌ನಿಂದಲೇ ಮೋಡಿಮಾಡಿದ `ದಿಲ್ ಖುಷ್` : ಚಿತ್ರತಂಡಕ್ಕೆ ಶುಭಕೋರಿದ ಡಾರ್ಲಿಂಗ್ ಕೃಷ್ಣ

Sat, 04 Nov 2023-6:40 pm,

"ದಿಲ್ ಖುಷ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ,‌ ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌ "ದಿಲ್ ಖುಷ್" ಎಂದರೆ ನಾಯಕ - ನಾಯಕಿ ಹೆಸರು. ದಿಲ್ಮಯ ನಾಯಕಿಯ ಹೆಸರಾದರೆ, ಕುಷಾಲ್ ನಾಯಕನ ಹೆಸರು. ಮನೆಮಂದಿಯಲ್ಲಾ ಕುಳಿತು ನೋಡುವ ಈ ಕೌಟುಂಬಿಕ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ. 

ಯುವಪ್ರತಿಭೆ ರಂಜಿತ್ "ದಿಲ್ ಖುಷ್" ಚಿತ್ರದ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ.  ರಂಗಾಯಣ ರಘು, ಅರುಣಾ ಬಾಲರಾಜ್,  ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು,  ಸೂರ್ಯ ಪ್ರವೀಣ್ ಮುಂತಾದವರು ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.    

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದೆ.     

ನಿವಾಸ್ ನಾರಾಯಣ್ ಅವರ  ಛಾಯಾಗ್ರಹಣವಿರುವ ಈ ಚಿತ್ರಕ್ಕೆ  ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.  

ರಂಜಿತ್ "ದಿಲ್ ಖುಷ್" ಚಿತ್ರದ ನಾಯಕ, ಸ್ಪಂದನ ಸೋಮಣ್ಣ ನಾಯಕಿ

ರಂಜಿತ್ "ದಿಲ್ ಖುಷ್" ಚಿತ್ರದ ನಾಯಕ, ಸ್ಪಂದನ ಸೋಮಣ್ಣ ನಾಯಕಿ

ZEENEWS TRENDING STORIES

By continuing to use the site, you agree to the use of cookies. You can find out more by Tapping this link