ಕಿಂಗ್ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್ ಕಾರ್ತಿಕ್..`ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ` ಎಂದ ಸ್ಟಾರ್ ಆಟಗಾರ..!
ಟಿ20 ವಿಶ್ವಕಪ್ ಗೆದ್ದ ನಂತರ ಕಿಂಗ್ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್ ಅದ್ಭುತ ಆಟ ಪ್ರದರ್ಶಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ ಆಡಿದ ಮೂರು ಪಂದ್ಯಗಳಲ್ಲಿ ಕೊಂಗ್ ಕೊಹ್ಲಿ ಹೆಚ್ಚು ರನ್ ಕಲೆಹಾಕುವಲ್ಲಿ ಸೋತು, ಎಲ್ ಬಿಡಬ್ಲ್ಯೂಗೆ ವಿಕೆಟ್ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದರು.
ಇದರ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಆಟಗಾರ ದಿನೇಶ್ ಕಾರ್ತಿಕ್, ಕೊಹ್ಲಿ ಅವರ ಈ ಕಳಪೆ ಆಟವನ್ನು ನಾನು ಸಪೋರ್ಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ದಿನೇಶ್ ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ. ಈ ಇಬ್ಬರು ಆಟಗಾರರು ಒಟ್ಟಿಗೆ ಹಲವು ಪಂದ್ಯಗಳನ್ನಾಡಿದ್ದಾರೆ.
ಟಿ20 ವಿಸ್ವಕಪ್‌ನ ನಂತರರ ವಿಶ್ರಾಂತಿ ಪಡೆದು ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದ ಕಿಂಗ್ ಕೊಹ್ಲಿಯ ಮೇಲೆ ಎಲ್ಲರೂ ಭಾರಿ ನಿರೀಕ್ಷೆಯನ್ನಿಟ್ಟಿದ್ದರು.
ಶ್ರೀಲಂಕಾ ವಿರುದ್ದ ನಡೆದ ಟಿ20 ಪಂದ್ಯದಲ್ಲಿ ಯುವ ಆಟಗಾರರನ್ನು ಒಳಗೊಂಡ ಟೀಂ ಇಂಡಿಯಾ ಉತ್ತಮ ಪ್ರದರ್ಸನ ನೀಡಿ ಪಂದ್ಯವನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಗೆದ್ದು ಕೊಂಡಿತ್ತು.
ಆದರೆ, ರೋಹಿತ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ಕಾರನ ಎಲ್ಲರೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ಗೆದ್ದುಕೊಳ್ಳುತ್ತೆ ಎಂದು ಭಾವಿಸಿದ್ದರು, ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ಸ್ಟಾರ್ ಆಟಗಾರರು ಉಸಿ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ಸೋಲಿನ ನಂತರ ಮಾತನಡಿದ ದಿನೇಶ್ ಕಾರ್ತಿಕ್" ಈ ಒಂದು ವಿಚಾರದಲ್ಲಿ ನಾನು ಕೊಹ್ಲಿ ಅವರ ಬೆನ್ನಿಗೆ ನಿಲ್ಲುವುದಿಲ್ಲ, ಆದರೆ ಶ್ರೀಲಂಕಾದ ಪಿಚ್‌ನಲ್ಲಿ ಆಡುವುದು ತುಂಬಾ ಕಷ್ಟ ಅದರಿಂದಲೇ ಕಿಂಗ್ ಕೊಹ್ಲಿಯ ಕೈಯಲ್ಲಿ ಒಳ್ಳೆಯ ಪ್ರದರ್ಶನ ನೀಡಲಾಗಿಲ್ಲ" ಎಂದಿದ್ದಾರೆ.
"ಕೊಹ್ಲಿ ತಪ್ಪಿಲ್ಲ ಎಂದು ನಾನು ಹೇಳುತ್ತಿಲ್ಲ..ಅಂತಹ ಪಿಚ್‌ನಲ್ಲಿ ಆಡುವುದು ಕಷ್ಟ ಎಂದು ಹೇಳಿದೆ" ಎಂದು ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.