ಕರ್ಪೂರವನ್ನು ಈ ಎಣ್ಣೆಯಲ್ಲಿ ಅದ್ದಿ ಹಚ್ಚಿ: ಬಿಳಿಕೂದಲು ಮತ್ತೆಂದೂ ಬಾರದಂತೆ ಬುಡದಿಂದಲೇ ಕಪ್ಪಾಗುತ್ತೆ… ಕೇವಲ 10 ನಿಮಿಷದಲ್ಲಿ!
ಆಯುರ್ವೇದದ ಪ್ರಕಾರ, ಕರ್ಪೂರವು ಆರೋಗ್ಯಕರ ನೆತ್ತಿ ಮತ್ತು ಬಲವಾದ, ಹೊಳೆಯುವ ಕೂದಲನ್ನು ನೀಡುವಲ್ಲಿ ಸಹಾಯವಾಗಿದೆ. ಇದು ಸಾಮಾನ್ಯವಾಗಿ ತಲೆಹೊಟ್ಟು, ಎಣ್ಣೆಯುಕ್ತ ನೆತ್ತಿ, ಬಿಳಿ ಕೂದಲಿನಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಪರಿಣಾಕಾರಿ.
ಕೂದಲು ಉದುರುವುದು, ಒಡೆಯುವುದು ಮತ್ತು ಬಿಳಿಯಾಗುವುದನ್ನು ಕಡಿಮೆ ಮಾಡಲು ಕರ್ಪೂರ ಎಣ್ಣೆಯನ್ನು ಬಳಕೆ ಮಾಡಬಹುದು.
ಇತ್ತೀಚಿನ ಸಂಶೋಧನೆಯ ಪ್ರಕಾರ, ಕರ್ಪೂರವನ್ನು ತಲೆಗೆ ಹಚ್ಚುವುದರಿಂದ ತುರಿಕೆಯಂತಹ ರಿಕಿರಿಯಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲದೆ, ವಿವಿಧ ಸೋಂಕುಗಳು ಮತ್ತು ಕೂದಲಿನ ಸಮಸ್ಯೆಗಳನ್ನು ದೂರವಿರಿಸುತ್ತದೆ.
ನೆತ್ತಿಯ ಸೋಂಕಿನಿಂದ ಉಂಟಾಗುವ ತುರಿಕೆ ಮತ್ತು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ತಲೆಯಲ್ಲಿನ ಅಧಿಕ ಶಾಖವನ್ನು ಕಡಿಮೆ ಮಾಡಲು ಮತ್ತು ಪಿತ್ತ ದೋಷವನ್ನು ಸಮತೋಲನಗೊಳಿಸಲು ಕರ್ಪೂರವನ್ನು ಹೆಚ್ಚಾಗಿ ಮೆಂತೆಯೊಂದಿಗೆ ಬಳಸಲಾಗುತ್ತದೆ.
ಸಂಶೋಧನೆಯ ಪ್ರಕಾರ, ಕರ್ಪೂರವನ್ನು ಅನ್ವಯಿಸುವುದರಿಂದ ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಬೇರುಗಳನ್ನು ಬಲಪಡಿಸುತ್ತದೆ.
ಇದಷ್ಟೇ ಅಲ್ಲದೆ, ತೆಂಗಿನೆಣ್ಣೆಯ ಜೊತೆ ಕರ್ಪೂರದ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಿದಾದ ಬಿಳಿಕೂದಲಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ವಾರಕ್ಕೊಮ್ಮೆ ಈ ಟಿಪ್ಸ್ ಫಾಲೋ ಮಾಡಿದರೆ ಶಾಶ್ವತವಾಗಿ ಕೂದಲು ಕಪ್ಪಾಗುತ್ತದೆ.
ಕರ್ಪೂರ ಉತ್ತಮ ಆರ್ಧ್ರಕ ಗುಣಗಳನ್ನು ಹೊಂದಿದೆ. ಕೂದಲಿಗೆ ಅನ್ವಯಿಸಿದಾಗ, ಇದು ಶುಷ್ಕತೆ, ಒಡೆದ ತುದಿಗಳು ಮತ್ತು ಒಡೆಯುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ZEE Kannada News ಹೇಳಿಕೊಳ್ಳುವುದಿಲ್ಲ.