ಮೊದಲ ಪತ್ನಿಯೂ ಇಲ್ಲ.. ಎರಡನೇ ಹೆಂಡತಿಯ ಜೊತೆಯೂ ಜಗಳ; ನರಕಯಾತನೆಯಾಗಿತ್ತು ನಿರ್ದೇಶಕ ಗುರುಪ್ರಸಾದ್ ಜೀವನ! ಆತ್ಮಹತ್ಯೆಗೆ ಕಾರಣವಾಗಿದ್ದು ಈ ಕಾರಣವೇ?
)
ನಿರ್ದೇಶಕ ಗುರು ಪ್ರಸಾದ್ ಜೀವನ ನರಕಯಾತನೆಯಾಗಿತ್ತು ಎನ್ನಲಾಗುತ್ತಿದೆ. ಗುರು ಪ್ರಸಾದ್ ಆತ್ಮಹತ್ಯೆಯ ಹಿಂದಿನ ಕಾರಣವೇನು? ಇಲ್ಲಿದೆ ನೋಡಿ ಮಾಹಿತಿ...
)
ನಟ ನಿರ್ದೇಶಕ ಗುರು ಪ್ರಸಾದ್ ಸಾವಿನ ಸುದ್ದಿ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ.
)
ನಿರ್ದೇಶಕ ಗುರು ಪ್ರಸಾದ್ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದರೂ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 52 ವರ್ಷ ಗುರು ಪ್ರಸಾದ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. 2006 ರಲ್ಲಿ ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರು ಪ್ರಸಾದ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಹೀಗೆ ಹಲವು ಸಿನಿಮಾಗಳನ್ನು ಗುರು ಪ್ರಸಾದ್ ಮಾಡಿದ್ದಾರೆ. ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ದರು. ಕನ್ನಡದ ಬಿಗ್ ಬಾಸ್ ನಲ್ಲೂ ಮಿಂಚಿದ್ದರು ಗುರು ಪ್ರಸಾದ್.
ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಗುರು ಪ್ರಸಾದ್ ಸುದ್ದಿಯಲ್ಲಿರುತ್ತಿದ್ದರು. ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತದೆ.
ಗುರು ಪ್ರಸಾದ್ ನಿರ್ದೇಶನದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲದ ಬಲೆಗೆ ಸಿಲುಕಿದ್ದರು.
ಗುರು ಪ್ರಸಾದ್ ಮೊದಲ ಪತ್ನಿಯೂ ಗುರು ಪ್ರಸಾದ್ ಅವರಿಂದ ದೂರವಾಗಿದ್ದರು. ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಆದರೆ ಎರಡನೇ ಹೆಂಡತಿ ಸಹ ಗುರು ಪ್ರಸಾದ್ ಜೊತೆಯಿರಲಿಲ್ಲ ಎನ್ನಲಾಗಿದೆ.
ಗುರು ಪ್ರಸಾದ್ ಕುಟುಂಬದೊಂದಿಗೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ ಎನ್ನಲಾಗುತ್ತದೆ. ಗುರು ಪ್ರಸಾದ್ ಎರಡನೇ ಮದುವೆ ಬಳಿಕ ಹೆಣ್ಣು ಮಗು ಜನಿಸಿತ್ತು. ಈ ಆ ಮಗುವಿಗೆ ಮೂರು ವರ್ಷ ಎನ್ನಲಾಗುತ್ತಿದೆ.
ಇದೀಗ ಏಕಾಏಕಿ ಗುರು ಪ್ರಸಾದ್ ನೇಣಿಗೆ ಕೊರಳೊಡ್ಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಗುರು ಪ್ರಸಾದ್ ವಾಸವಿದ್ದರು. ಅದೇ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರು ಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.