Junk Food Disadvantages: ಮಕ್ಕಳ ಬೆಳವಣಿಗೆಗೆ ಹಾನಿಕಾರಕ ಈ ಜನಪ್ರಿಯ ಜಂಕ್ ಫುಡ್‌ಗಳು

Mon, 18 Mar 2024-2:51 pm,

ಜಂಕ್ ಫುಡ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿದ್ದರೂ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ ಎಂಬ ಕಾರಣಕ್ಕೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಪೋಷಕರು ಮಕ್ಕಳಿಗೆ ಜಂಕ್ ಫುಡ್ಸ್ ನೀಡುತ್ತಾರೆ. ಆದರೆ, ಈ ಜಂಕ್ ಫುಡ್‌ಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಜಂಕ್ ಫುಡ್‌ಗಳು ದೇಹದಲ್ಲಿ ಕ್ರಮೇಣ ವಿಷವನ್ನು ಸಂಗ್ರಹಿಸುವುದರಿಂದ ಇದು ದೀರ್ಘಾವಧಿಯಲ್ಲಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಎಂತಹ ಜಂಕ್ ಆಹಾರಗಳನ್ನು ಮಕ್ಕಳಿಗೆ ನೀಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...   

ಕುಕ್ಕೀಸ್ ಗಳಲ್ಲಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶ ಕಂಡು ಬರುತ್ತದೆ. ಇದು ಮಗುವಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಮಕ್ಕಳಿಗೆ ಅತಿಯಾಗಿ ಕುಕ್ಕೀಸ್ ಅಭ್ಯಾಸ ಮಾಡದಿರುವುದು ಒಳ್ಳೆಯದು. 

ಪಿಜ್ಜಾ- ಬರ್ಗರ್‌ ಹೆಸರು ಕೇಳಿದರೆ ಮಕ್ಕಳಿರಲಿ ದೊಡ್ಡವರ ಬಾಯಲ್ಲೂ ನೀರೂರುತ್ತದೆ. ಆದರೆ, ಪಿಜ್ಜಾ- ಬರ್ಗರ್‌ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು, ಸೋಡಿಯಂ ಮತ್ತು ಕ್ಯಾಲೋರಿಗಳಲ್ಲಿ ಅಧಿಕವಾಗಿರುತ್ತದೆ. ಹಾಗಾಗಿ, ನಿಯಮಿತವಾಗಿ ಇವುಗಳ ಸೇವನೆಯು ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. 

ಬಣ್ಣ ಬಣ್ಣದ ಕ್ಯಾಂಡಿ ಮತ್ತು ಸಿಹಿತಿಂಡಿಗಳು ಮಕ್ಕಳನ್ನು ಆಕರ್ಷಿಸುವುದು ಸಹಜವೇ. ಆದರೆ, ಮಕ್ಕಳ ಹಲ್ಲುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. 

ಕೋಲ್ಡ್, ಎನರ್ಜಿ ಡ್ರಿಂಕ್ಸ್ ಗಳು ಅಧಿಕ ಸಕ್ಕರೆ ಜೊತೆಗೆ ಹೆಚ್ಚಿನ ಕ್ಯಾಲೋರಿ ಮಿಶ್ರಿತ ಪಾನೀಯಗಳು. ಮಕ್ಕಳು ಹೆಚ್ಚಾಗಿ ಇಂತಹ ಪಾನೀಯಗಳನ್ನು ಸೇವಿಸುವುದು ಟೈಪ್-2 ಮಧುಮೇಹದಂತಹ ಅಪಾಯವನ್ನು ಹೆಚ್ಚಿಸಬಹುದು. 

ಆಲೂಗೆಡ್ಡೆ ಚಿಪ್ಸ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ತಿನ್ನಲು ಬಲು ರುಚಿ ಎಂದೆನಿಸುವ ಈ ಆಲೂಗೆಡ್ಡೆ ಚಿಪ್ಸ್ ಅಕ್ರಿಲಾಮೈಡ್‌ನಂತಹ ಹಾನಿಕಾರಕ ವಸ್ತುಗಳನ್ನು ಹೊಂದಿರಬಹುದು.  ಇದು ಕ್ಯಾನ್ಸರ್‌ಗೆ ಸಂಬಂಧಿಸಿದೆ. ಇದಲ್ಲದೆ, ಅತಿಯಾದ ಆಲೂಗಡ್ಡೆ ಚಿಪ್ಸ್ ಸೇವನೆಯು ಹೃದ್ರೋಗದ ಅಪಾಯವನ್ನು ಕೂಡ ಹೆಚ್ಚಿಸಬಹುದು. 

ಪ್ರಸ್ತುತ, ದಿಢೀರ್ ಆಹಾರ ಎಂದೊಡನೆ ತಟ್ಟನೆ ನೆನಪಾಗುವುದು ನೂಡಲ್ಸ್. ಆದರೆ, ಇದರಲ್ಲಿ ಸೋಡಿಯಂ ಜೊತೇ ಸುವಾಸನೆಗಾಗಿ ರಾಸಾಯನಿಕಗಳನ್ನು ಸೇರಿಸಲಾಗಿರುತ್ತದೆ. ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link