ಅರಿಶಿನವನ್ನು ಹೆಚ್ಚು ಬಳಸುವುದರಿಂದಾಗುವ ಅಡ್ಡಪರಿಣಾಮಗಳೇನು ಗೊತ್ತಾ..?
ನಿಮ್ಮ ದೇಹವು ಮಸಾಲೆಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ಅರಿಶಿನ ಸೇವನೆಯು ಅದರ ಸೂಕ್ಷ್ಮತೆಯ ಕಾರಣದಿಂದಾಗಿ ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡಬಹುದು.
ಹೆಚ್ಚಿನ ಪ್ರಮಾಣದ ಅರಿಶಿನ ಸೇವನೆಯು ಎದೆಯೂರಿ ಆಮ್ಲೀಯತೆಯನ್ನು ಉಂಟುಮಾಡಬಹುದು.
ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಅಂಶವನ್ನು ಸೇವಿಸುವವರು ವಾಕರಿಕೆಗಳಂತಹ ಅನುಭವಗಳನ್ನು ಎದುರಿಸಬೇಕಾಗುತ್ತದೆ.
ನೀವು ತೆಳುವಾದ ಚರ್ಮವನ್ನು ಹೊಂದಿದ್ದರೆ ಅರಿಶಿನವನ್ನು ಮುಖಕ್ಕೆ ಬಳಸದಿರಿ ಏಕೆಂದರೆ ತೊಳೆದ ನಂತರ ನಿಮ್ಮ ಮುಖ ಹಳದಿಯಾಗಿ ಬಿಡುತ್ತದೆ. ಇದು ಆರೋಗ್ಯ ಸಮಸ್ಯೆ ಅಲ್ಲವಾದರೂ ಮನೆಯಿಂದ ಹೊರಬರಲು ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ.