ಬೆಳ್ಳಿ ಬಟ್ಟೆಯಲ್ಲಿ ಬಂಗಾರದ ಜಿಂಕೆ ದಿಶಾ..! ಫೋಟೋಸ್ ವೈರಲ್
ಇಂಡಿಯಾ ಕೌಚರ್ ವೀಕ್‌ನಲ್ಲಿ ಫ್ಯಾಷನ್ ಇವೆಂಟ್‌ನಲ್ಲಿ ನಟಿ ದಿಶಾ ಪಟಾನಿ ಕ್ಯಾಟ್ ವಾಕ್ ಮಾಡಿದರು.
ಫ್ಯಾಷನ್ ಡಿಸೈನರ್ ಡಾಲಿ ಜೆಗಾಗಿ ದಿಶಾ ರ‍್ಯಾಂಪ್ ವಾಕ್ ಮಾಡಿದ್ರು, ಈ ವೇಳೆ ನಟಿ ತೊಡೆ ಎತ್ತರದ ಸ್ಲಿಟ್ ಲೆಹೆಂಗಾದಲ್ಲಿ ಸಖತ್ತ ಹಾಟ್ ಆಗಿ ಕಾಣಿಸುತ್ತಿದ್ದರು.
ಜುಲೈ 25 ರಂದು ಇಂಡಿಯಾ ಕೌಚರ್ ವೀಕ್‌ನಲ್ಲಿ ಫ್ಯಾಷನ್ ಈವೆಂಟ್ ಪ್ರಾರಂಭವಾಯಿತು. ಆಗಸ್ಟ್ 2 ರಂದು ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಕೊನೆಗೊಳ್ಳಲಿದೆ.
ಇಂಡಿಯಾ ಕೌಚರ್ ವೀಕ್ 2023 ರಲ್ಲಿ ದಿಶಾ ಪಟಾನಿ ಲುಕ್ ಬೆರಗುಗೊಳಿಸುವಂತಿತ್ತು. ನಟಿಯ ಮಾದಕ ನೋಟ ಪ್ರೇಕ್ಷಕರನ್ನು ಬೆರಗುಗೊಳಿಸಿತು.
ನಟಿ ದಿಶಾ ಪಟಾನಿ 2015 ರಲ್ಲಿ ತೆಲುಗು ಚಿತ್ರ ಲೋಫರ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
ಭಾರತ್, ಮಲಂಗ್, ಮತ್ತು ಬಾಘಿ 3 ನಂತಹ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.
ಸಧ್ಯ ನಟಿ ದಿಶಾ ನಿರ್ದೇಶಕ ನಾಗ್ ಅಶ್ವಿನ್ ಅವರ ಬಹು ನಿರೀಕ್ಷಿತ ಸಿನಿಮಾ ಕಲ್ಕಿ 2898 AD ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ.