ಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದ

Mon, 05 Aug 2024-6:05 pm,

ನಟನಾ ರಂಗಕ್ಕೆ ಬರುವ ಬಹುತೇಕರ ಕನಸು ಸಿನಿಮಾ, ಆದರೆ ಸಿನಿಮಾದಲ್ಲಿ ಎಲ್ಲರೂ ಮಿಂಚುವುದು ಸಾಧ್ಯವಾಗುವುದಿಲ್ಲ. ಆದ್ರೆ ಈ ನಟಿ ಧಾರಾವಾಹಿ ಮೂಲಕವೇ ಮನೆ ಮಾತಾಗಿ ಬಿಟ್ಟರು. 

ದಿಶಾ ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದವರು. ನಾಟಕ ಕಲೆಯಲ್ಲಿ ಪದವಿ ಪಡೆದು, ಅನೇಕ ಜನಪ್ರಿಯ ನಾಟಕಗಳ ಭಾಗವಾಗಿದ್ದರು.

ಐಶ್ವರ್ಯಾ ರೈ ಬಚ್ಚನ್ ಜೊತೆ 'ದೇವದಾಸ್' ಮತ್ತು 'ಜೋಧಾ ಅಕ್ಬರ್' ನಂತಹ ಹಿಟ್ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕೆಲಸ ಮಾಡಿದ್ದಾರೆ.ಪ್ರಿಯಾಂಕಾ ಚೋಪ್ರಾ ಅವರ 'ಲವ್ ಸ್ಟೋರಿ 2050' ನಲ್ಲಿಯೂ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಸಿತ್ ಮೋದಿಯವರ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾದಲ್ಲಿ ಪ್ರಮುಖ ಪಾತ್ರ ಇವರದ್ದಾಗಿತ್ತು. ಜೇಟಲಾಲ್ ಪತ್ನಿ ದಯಾಬೆನ್ ಪಾತ್ರವನ್ನು ನಿರ್ವಹಿಸುವ ಮೂಲಕ,  ಮನೆ ಮಾತಾಗಿ ಬಿಟ್ಟರು.   

ದಿಶಾ ವಕಾನಿ 11 ವರ್ಷಗಳ ಕಾಲ ದಯಾಬೆನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಹೆರಿಗೆಗೆಂದು ತೆರಳಿದವರು ಮತ್ತೆ ಶೋಗೆ ವಾಪಗಲಿಲ್ಲ. ಅವರ ಪಾತ್ರಕ್ಕೆ ಬೇರೆಯವರನ್ನು ಕರೆ ತರಲೂ ಇಲ್ಲ. ಯಾಕೆಂದರೆ ಆ ಪಾತ್ರ ದಿಶಾ ಬಿಟ್ಟು ಯಾರೇ ಮಾಡಿದರೂ ಇನ್ನು ಜನ ಒಪ್ಪಿಕೊಳ್ಳುವುದು ಕಷ್ಟ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link