BBK9 : ಕೈ ಕೊಟ್ಟ ಅದೃಷ್ಟ... ಬಿಗ್‌ಬಾಸ್‌ ಹೌಸ್‌ನಿಂದ ದಿವ್ಯಾ ಉರುಡುಗ ಔಟ್‌...!

Fri, 30 Dec 2022-6:00 pm,

ಎರಡನೇ ಬಾರಿಗೆ ದಿವ್ಯಾ ಉರುಡುಗ ಲಕ್‌ ಕೈ ಕೊಟ್ಟಿದೆ. ಬಿಗ್‌ ಬಾಸ್‌ನಿಂದ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಿದ್ದಾರೆ.

ಕೊನೆಯವರೆಗೂ ಉತ್ತಮ ಆಟ ಆಡುತ್ತ ಬಂದಿದ್ದ ದಿವ್ಯಾ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

ಬಿಗ್‌ಹೌಸ್‌ ಸ್ಪರ್ಧಿಗಳಿಗೆ ಗಟ್ಟಿ ಪೈಪೋಟಿ ನೀಡಿದ್ದ ದಿವ್ಯಾ ಈಗ ಐದನೇ ಸ್ಥಾನದಲ್ಲಿ ಎಲಿಮಿನೇಟ್ ಆಗಿದ್ದಾರೆ. 

ಬಿಗ್‌ಬಾಸ್‌ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ದಿವ್ಯಾ ದೊಡ್ಮನೆಯಲ್ಲಿದ್ದರು. ಸೀಸನ್‌ 9ರಲ್ಲಿ ಒಂಟಿಯಾಗಿ ಆಟ ಶುರುಮಾಡಿದ್ದರು.

ದಿವ್ಯಾ ಗೆಲ್ತಾರೆ ಅಂತ ಅವರ ಫ್ಯಾನ್ಸ್‌ಗೆ ಬಲವಾದ ನಂಬಿಕೆ ಇತ್ತು.  ಆದರೂ ಈ ಬಾರಿ ಕೂಡ ದಿವ್ಯಾ ಅದೃಷ್ಟ ಕೈ ಕೊಟ್ಟಿದೆ. 

ಇನ್ನು ಡಿ.30 ಮತ್ತು 31ರಂದು ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಡೆಯಲಿದ್ದು, ವಿನ್ನರ್‌ ಯಾರಾಗ್ತಾರೆ ಅಂತ ಕಾಯ್ದು ನೋಡಬೇಕಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link