ದೀಪಾವಳಿಗೂ ಮುನ್ನ 8 ಮಹತ್ವದ ಯೋಗಗಳ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಅವಕಾಶ!
2. ಶನಿ ಪುಷ್ಯ ಹೊರತುಪಡಿಸಿ ನವೆಂಬರ್ 4, 2023 ರಂದು ಈ ಯೋಗ ನಿರ್ಮಾಣ: ಹಿಂದೂ ಪಂಚಾಂಗದ ಪ್ರಕಾರ ನವೆಂಬರ್ 4, 2023ರಂದು ಶನಿವಾರ ಪುಷ್ಯ ನಕ್ಷತ್ರದ ಜೊತೆಗೆ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ ಪುಷ್ಯ ನಕ್ಷತ್ರಕ್ಕೆ ಅಧಿಪತಿಯಾಗಿರುವ ಶನಿ ಕೂಡ ತನ್ನ ಸ್ವರಾಶಿಯಲ್ಲಿಯೇ ಇರಲಿದ್ದಾನೆ. ಇದಲ್ಲದೆ ಶಶ ಮಹಾಪುರುಷ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಇವೆಲ್ಲ ಶುಭ ಕಾಕತಾಳೀಯಗಳ ಜೊತೆಗೆ ಈ ದಿನ ಶಂಖ, ಲಕ್ಷ್ಮಿ, ಶಶ, ಹರ್ಷ, ಸರಲ, ಸಾಧ್ಯ, ಮಿತ್ರ ಯೋಗಗಳ ನಿರ್ಮಾಣ ಕೂಡ ನೆರವೇರುತ್ತಿವೆ.
3. ರವಿ ಪುಷ್ಯ ಯೋಗದ ಜೊತೆಗೆ ನವೆಂಬರ್ 5, 2023 ರಂದು ಈ ಯೋಗ ರೂಪುಗೊಳ್ಳುತ್ತಿವೆ: ನವೆಂಬರ್ 5, 2023 ರಂದು ರವಿಪುಷ್ಯ ಯೋಗದ ಜೊತೆಗೆ ಸರ್ವಾರ್ಥಸಿದ್ಧಿ ಯೋಗ, ಗಜಕೇಸರಿ ಯೋಗಗಳ ಜೊತೆಗೆ ಶುಭ, ಶ್ರೀವತ್ಸ, ಅಮಲಾ, ವಾಶಿ, ಸರಲ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ.
4. ಗ್ರಹಗಳ ಮೈತ್ರಿಯಿಂದ ರೂಪುಗೊಳ್ಳುತ್ತಿದೆ ಮಂಗಳಕಾರಿ ಯೋಗ: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಹಾಗೂ ದೇವ-ದೇವತೆಗಳ ಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಇಬ್ಬರ ಸ್ಥಿತಿಯಿಂದ ಮಂಗಳಕಾರಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಭಾವಿಸಲಾಗಿದೆ. ಈ ಎಲ್ಲಾ ಶುಭಯೋಗಗಳ ನಿರ್ಮಾಣದ ಕಾರಣ ಮೇಷ, ವೃಷಭ ತುಲಾ ಧನು ಹಾಗೂ ಕುಂಭ ರಾಶಿಗಳ ಜಾತಕದವರಿಗೆ ವಿಶೇಷ ಲಾಭಗಳು ಸಿಗಲಿವೆ.
5. ನವೆಂಬರ್ 4 ಮತ್ತು 5 ಖರೀದಿಗೆ ಉತ್ತಮ: ಖರೀದಿಗಾಗಿ ಪುಷ್ಯ ನಕ್ಷತ್ರವನ್ನು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಏಕೆಂದರೆ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರಕ್ಕೆ ನಕ್ಷತ್ರಗಳ ರಾಜನ ಸ್ಥಾನಮಾನ ನೀಡಲಾಗಿದೆ. ಈ ನಕ್ಷತ್ರಕ್ಕೆ ಶನಿ ಹಾಗೂ ದೇವಗುರು ಬೃಹಸ್ಪತಿ ಅಧಿಪತಿಯಾಗಿದ್ದಾರೆ. ಒಂದೆಡೆ ಗುರುವನ್ನು ಧನ ಹಾಗೂ ಜ್ಞಾನದ ಕಾರಕ ಎಂದು ಭಾವಿಸಲಾಗಿದ್ದಾರೆ. ಇನ್ನೊಂದೆಡೆ ಶನಿಗೆ ಸ್ಥಿರತೆಯ ಕಾರಕ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ದಿನ ಖರೀದಿಸಲಾಗುವ ಸರಕು ದೀರ್ಘಕಾಲದವರೆಗೆ ನಿಮ್ಮ ಬಳಿ ಇರುತ್ತದೆ ಮತ್ತು ಇದರಿಂದ ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಹೀಗಾಗಿ ಈ ದಿನ ನೀವು ಯಾವುದಾದರೊಂದು ಹೊಸ ಕಾರ್ಯ ಆರಂಭಿಸಲು ಬಯಸುತ್ತಿದ್ದರೆ, ತುಂಬಾ ಉತ್ತಮ ದಿನ ಎನ್ನಲಾಗುತ್ತದೆ. ಇದಲ್ಲದೆ ಈ ದಿನ ವಾಹನ, ಸಂಪತ್ತು, ಮನೆ, ಆಭರಣ, ಬಟ್ಟೆ ಇತ್ಯಾದಿಗಳ ಖರೀದಿಸುವುದು ಅತ್ಯಂತ ಶುಭ ಎಂದು ಭಾವಿಸಲಾಗುತ್ತದೆ.
6. ಈ ರಾಶಿಗಳಿಗೆ ಲಾಭದಾಯಕವಾಗಿದೆ: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಗೂ ಮುನ್ನ ನಿರ್ಮಾಣಗೊಳ್ಳುತ್ತಿರುವ ಈ ಶುಭ ಯೋಗಗಳಿಂದ ಕೆಲ ರಾಶಿಗಳ ಜನರ ಮೇಲೆ ಶನಿ ಹಾಗೂ ಗುರುವಿನ ಅಪಾರ ಕೃಪೆ ಇರಲಿದೆ. ಹೀಗಿರುವಾಗ ಮೇಷ, ಮಿಥುನ, ಕರ್ಕ, ಧನು, ಮಕರ ಹಾಗೂ ಕುಂಭ ರಾಶಿಗಳ ಜಾತಕದವರಿಗೆ ಇದರ ವಿಶೇಷ ಲಾಭ ಸಿಗಲಿದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ನಿಂತುಹೋದ ಎಲ್ಲಾ ಕಾರ್ಯಗಳು ಪುನಃ ಆರಂಭಗೊಳ್ಳಲಿವೆ. ಬಿಸ್ನೆಸ್ ಹಾಗೂ ನೌಕರಿಯಲ್ಲಿ ಉನ್ನತಿಯ ಎಲ್ಲಾ ಯೋಗಗಳು ಗೋಚರಿಸುತ್ತಿವೆ.
7. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)