ಈ ವಸ್ತುಗಳಿಲ್ಲದೇ ದೀಪಾವಳಿ ಪೂಜೆ ಅಪೂರ್ಣ, ಧನ ಲಕ್ಷ್ಮಿಯ ಕೃಪೆ ಸಿಗುವುದಿಲ್ಲ..!
ದೀಪಾವಳಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಅಂದು ಹೊಸ ಬಟ್ಟೆ ಧರಿಸಿ ಪಟಾಕಿ ಸಿಡಿಸುವ ಸಂಪ್ರದಾಯವಿದೆ. ಈ ಹಬ್ಬವನ್ನು ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಗಳನ್ನು ಬೆಳಗಿಸುವ ಮೂಲಕ ಜನ ಹಬ್ಬವನ್ನು ಸಂಭ್ರಮಿಸುತ್ತಾರೆ..
ಲಕ್ಷ್ಮಿ ಪೂಜೆ ವೇಳೆ ಕೆಲವು ವಸ್ತುಗಳು ಇರಲೇಬೇಕು. ಇಲ್ಲದಿದ್ದರೆ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ವಿದ್ವಾಂಸರ ಪ್ರಕಾರ ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂದು ತಿಳಿಯೋಣ.
ಲಕ್ಷ್ಮಿ ಪೂಜೆಯಲ್ಲಿ ಗಣಪತಿ, ಕೆಂಪು ಬಟ್ಟೆ, ಅಮ್ಮನ ಪ್ರತಿಮೆ, ಬೆಳ್ಳಿ ನಾಣ್ಯ, ಚಿನ್ನ, ಕಮಲದ ಬೀಜಗಳು, ಅರಶಿನ, ಕುಂಕುಮ, ಶ್ರೀಗಂಧ, ಕರ್ಪೂರ, ಪಚ್ಚೆ ಕರ್ಪೂರ, ಏಲಕ್ಕಿ, ನಾಣ್ಯಗಳು, ಕಮಲದ ಹೂವು, ಗೋಮತಿ ಚಕ್ರ, ತುಪ್ಪ, ಸಿಹಿತಿಂಡಿಗಳನ್ನು ಒಳಗೊಂಡಿರಬೇಕು. .
ಪೂಜೆಯಲ್ಲಿ ಲಕ್ಷ್ಮಿ ಜೊತೆಗೆ ವಿಷ್ಣುವಿನ ಭಾವಚಿತ್ರ ಇರಬೇಕು. ದೀಪಾವಳಿಯ ಸಂದರ್ಭದಲ್ಲಿ ಮನೆಯ ಒಳಗೆ ಮತ್ತು ಹೊರಗೆ 13 ದೀಪಗಳನ್ನು ಬೆಳಗಿಸಬೇಕು.
ದೀಪಾವಳಿಯ ಹಿಂದಿನ ದಿನದಂದು ಧನ್ತೇರಸ್ ಮತ್ತು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಉತ್ತರದಲ್ಲಿ ದೀಪಾವಳಿಯ ನಂತರ ಗೋವರ್ಧನ ಪೂಜೆ ಮತ್ತು ಭಗಿನಿ ಹಸ್ತ ಭೋಜನವನ್ನು ಮಾಡಲಾಗುತ್ತದೆ. 0