Free Petrol: ದೀಪಾವಳಿಯ ಬಂಪರ್ ಆಫರ್: ಬರೋಬ್ಬರಿ 53 ಲೀಟರ್ ಪೆಟ್ರೋಲ್ ಫ್ರೀಯಾಗಿ ಸಿಗುತ್ತೆ!
ಸದ್ಯ ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ. ಕೆಲ ದಿನಗಳ ಹಿಂದೆ ದರ ಇಳಿಕೆಯಾಗಿದ್ದರೂ ಸಹ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್ ಬೆಲೆ ಗಗನಮುಖಿಯಾಗಿದೆ ಎನ್ನಬಹುದು. ಇನ್ನು ಪೆಟ್ರೋಲ್ ಉಚಿತವಾದರೆ ಸಿಕ್ಕರೆ ಯಾರಿಗೆ ತಾನೇ ಖುಷಿ ಆಗೋದಿಲ್ಲ ಹೇಳಿ? ಇದೀಗ ಆಕ್ಸಿಸ್ ಬ್ಯಾಂಕ್ ಇಂಡಿಯನ್ ಆಯಿಲ್ ಸಹಭಾಗಿತ್ವದಲ್ಲಿ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ರಚಿಸಿದೆ.
ಆಕ್ಸಿಸ್ ಬ್ಯಾಂಕ್ ಇಂಡಿಯನ್ ಆಯಿಲ್ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ಅನೇಕ ಕೊಡುಗೆಗಳನ್ನು ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್ ಪಡೆಯಲು ರೂ.500 ಎಂಟ್ರಿ ಶುಲ್ಕ ಪಾವತಿಸಬೇಕು. ಇನ್ನು ಈ ಕಾರ್ಡ್ ಮೂಲಕ ವಾರ್ಷಿಕವಾಗಿ ರೂ.50,000ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.
ಈ ಕ್ರೆಡಿಟ್ ಕಾರ್ಡ್‌ನೊಂದಿಗೆ ನೀವು ವರ್ಷಕ್ಕೆ 53 ಲೀಟರ್ ಇಂಧನವನ್ನು ಉಚಿತವಾಗಿ ಪಡೆಯಬಹುದು ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ.
ನೀವು 53 ಲೀಟರ್‌ಗಳವರೆಗೆ ಉಚಿತ ಪೆಟ್ರೋಲ್ ಪಡೆಯಬಹುದು. ಆದರೆ ಆಕ್ಸಿಸ್ ಬ್ಯಾಂಕ್ ಮೂಲಕ ನೀವು ಪೆಟ್ರೋಲ್ ಖರೀದಿಸಿದರೆ ಅದರ ಬೆಲೆ ಲೀಟರ್ ಗೆ 70 ರೂ. ಆಗಿದೆ. ಸದ್ಯ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.66 ರೂ. ಇದೆ. ಹೀಗಾಗಿ ಈ ಲೆಕ್ಕಾಚಾರದ ಪ್ರಕಾರ 33 ಲೀಟರ್ ಪೆಟ್ರೋಲ್ ಬೆಲೆ ಉಳಿತಾಯವಾಗಿ, ಉಚಿತವಾಗಿ ಪಡೆದಂತೆ ಆಗುತ್ತದೆ.
ಇನ್ನು ನೀವೂ ಕೂಡ ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದು ಯೋಚಿಸಿದರೆ, ನಿಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ಇಲ್ಲವೇ ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್‌ಮೂಲಕ ಅರ್ಜಿ ಸಲ್ಲಿಸಬಹುದು.