ದೀಪಾವಳಿ ಬಂಪರ್‌ ಆಫರ್‌; ಕೇವಲ 699 ರೂ.ಗಳಿಗೆ ಬಿಡುಗಡೆಯಾದ ಜಿಯೋ ಭಾರತ್‌ ಫೋನ್!

Mon, 28 Oct 2024-7:44 pm,

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಾಗ ರಿಲಯನ್ಸ್ ಜಿಯೋ ಭಾರತದ 2G ಫೋನ್ ಬಳಕೆದಾರರಿಗೆ ಬಂಪರ್ ಡೀಲ್ ನೀಡುತ್ತಿದೆ. ಈ ಮೂಲಕ ಹೆಚ್ಚಿನ ಜನರಿಗೆ ವೇಗದ ಇಂಟರ್ನೆಟ್‌ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. Jio Bharat ದೀಪಾವಳಿ ಧಮಾಕಾ ಆಫರ್‌ನಡಿ ಸಿಗುವ Jio Bharat K1 Karbonn ಫೋನ್ ಮೂಲ ಬೆಲೆ 999 ರೂ.ಗಳಾಗಿವೆ. ಆದರೆ ಹಬ್ಬದ ಕೊಡುಗೆಯಾಗಿ ಕೇವಲ 699 ರೂ.ಗಳಲ್ಲಿ ಇದು ಲಭ್ಯವಿದೆ.

ಈ ಸೀಮಿತ-ಸಮಯದ ಕೊಡುಗೆಯಲ್ಲಿ ಕಡಿಮೆ ಬೆಲೆಗೆ ನಿಮಗೆ ಫೋನ್‌ ಸಿಗಲಿದ್ದು, ಕೈಗೆಟುಕುವ ಮಾಸಿಕ ಯೋಜನೆಯೊಂದಿಗೆ ಸಿಗುತ್ತಿದೆ. 4Gಗೆ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಇದು ಆಕರ್ಷಕ ಆಯ್ಕೆಯಾಗಿದೆ. ಅಲ್ಲದೆ 123 ರೂ.ಗಳ ಮಾಸಿಕ ಶುಲ್ಕ ಪಾವತಿಸಿದರೆ ಜಿಯೋ ಭಾರತ್ ಬಳಕೆದಾರರು ಅನಿಯಮಿತ ವಾಯ್ಸ್ ಕರೆಗಳು, 14GB ಡೇಟಾ ಮತ್ತು 455ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು Access ಮಾಡಬಹುದು. ಈ ಯೋಜನೆಯು Jio Cinema ಮೂಲಕ ಸಿನಿಮಾಗಳ ಪ್ರೀಮಿಯರ್‌ಗಳು, ವಿಡಿಯೋ ಪ್ರದರ್ಶನಗಳು, ಲೈವ್ ಕ್ರೀಡೆಗಳು ಮತ್ತು ಮುಖ್ಯಾಂಶಗಳಿಗೆ ಪ್ರವೇಶವನ್ನು ಒದಗಿಸುತ್ತದೆ. 

QR ಕೋಡ್ ಸ್ಕ್ಯಾನ್‌ ಬಳಸಿಕೊಂಡು ಬಳಕೆದಾರರು Jio Pay ಮೂಲಕ ಡಿಜಿಟಲ್ ಪಾವತಿ ಮಾಡಬಹುದು ಮತ್ತು ಸ್ವೀಕರಿಸಬಹುದು. ಸ್ವೀಕರಿಸಿದ ಪಾವತಿಗಳಿಗೆ ಆಡಿಯಯೋ ನೋಟಿಫಿಕೇಶನ್ ಸಹ ಪಡೆಯಬಹುದು. ಇದಲ್ಲದೆ Jio Chat ಮೂಲಕ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಹೊಂದಬಹುದು. ಅಲ್ಲಿ ವಿಡಿಯೋ, ಫೋಟೋ ಮತ್ತು ಸಂದೇಶಗಳನ್ನು ಹಂಚಿಕೊಳ್ಳಬಹುದು. ಈ ವೈಶಿಷ್ಟ್ಯಗಳು ನಿಮ್ಮ ಈ ಫೋನ್‌ಗೆ ಸ್ಮಾರ್ಟ್‌ಫೋನ್ ಅನುಭವ ಒದಗಿಸುತ್ತದೆ.   

ಇತರೆ ಟೆಲಿಕಾಂ ಪೂರೈಕೆದಾರರು ಮೂಲ ಫೀಚರ್ ಫೋನ್ ಯೋಜನೆಗಳಿಗೆ ತಿಂಗಳಿಗೆ 199 ರೂ. ಶುಲ್ಕ ವಿಧಿಸಿದರೆ, ಜಿಯೋ ಭಾರತ್‌ನ 123 ರೂ.ನ ಯೋಜನೆಯು ಶೇ.40ರಷ್ಟು ಕಡಿಮೆಯಾಗಿದೆ. ಈ ಬೆಲೆಯು ಬಳಕೆದಾರರಿಗೆ ಪ್ರತಿ ತಿಂಗಳು 76 ರೂ. ಉಳಿಸಲು ಸಹಾಯ ಮಾಡುತ್ತದೆ. 9 ತಿಂಗಳೊಳಗೆ ಆ ಉಳಿತಾಯವು ಫೋನ್‌ನ ವೆಚ್ಚಕ್ಕೆ ಸಮನಾಗಿರುತ್ತದೆ. ಜಿಯೋ ಭಾರತ್ ಫೋನ್ ದೀರ್ಘಾವಧಿಯ 123 ರೂ. ಯೋಜನೆಯ ಸೌಲಭ್ಯ ಪಡೆಯುವ ಬಳಕೆದಾರರಿಗೆ ಬಹುತೇಕ ಉಚಿತವಾಗಿರುತ್ತದೆ. ರಿಲಯನ್ಸ್ ಜಿಯೋ ದೀಪಾವಳಿಯ ಅಂಗವಾಗಿ ಕೇವಲ ಫೋನ್ ಮಾರಾಟವನ್ನು ಮಾತ್ರ ಗುರಿಯಾಗಿಸದೆ, ಡಿಜಿಟಲ್ ಕನೆಕ್ಷನ್ ಮೂಲಕ ಎಲ್ಲರಿಗೂ ಪ್ರವೇಶಿಸುವ ಅವಕಾಶ ನೀಡುತ್ತಿದೆ.

ವಿಶೇಷವಾಗಿ ಇನ್ನೂ 2G ನೆಟ್‌ವರ್ಕ್‌ಗಳಲ್ಲಿ ಇರುವವರಿಗೆ ಲೈವ್ ಟಿವಿ ಮತ್ತು ಡಿಜಿಟಲ್ ಪಾವತಿಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಜಿಯೋ ಭಾರತ್ ಈ ಫೋನ್ ಅನ್ನು ಸಂವಹನ, ಮನರಂಜನೆ ಮತ್ತು ವಹಿವಾಟುಗಳಿಗೆ ಆಲ್-ಇನ್-ಒನ್ ಸಾಧನವಾಗಿ ಮಾರಾಟ ಮಾಡುತ್ತಿದೆ. ಸ್ವಿಚಿಂಗ್ ಮಾಡಲು ಆಸಕ್ತಿ ಹೊಂದಿರುವವರಿಗೆ Jio Bharat ದೀಪಾವಳಿ ಧಮಾಕಾ ಕೊಡುಗೆಯು ವಿವಿಧ ಚಿಲ್ಲರೆ ಮಳಿಗೆಗಳು, Jio Mart ಮತ್ತು Amazonನಲ್ಲಿ ಲಭ್ಯವಿದ್ದು, ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಸುಲಭ ಪ್ರವೇಶ ನೀಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link