ಮನೆಯಲ್ಲಿ ಸಾಕಷ್ಟು ಹಣ-ಸಂಪತ್ತು ತರುವ ದೀಪಾವಳಿಯ ಪರಿಣಾಮಕಾರಿ ಪರಿಹಾರ, ಸಾಕ್ಷಾತ್ ಲಕ್ಷ್ಮಿ, ಕುಬೇರರೇ ಖಜಾನೆಯಲ್ಲಿ ಕೂರುತ್ತಾರೆ!
ದೀಪಾವಳಿ ಹಬ್ಬದ ದಿನ ಮನೆಗೆ ಸಾಕಷ್ಟು ಹಣ ಮತ್ತು ಸಂಪತ್ತನ್ನು ತರುವಂತಹ ದೀಪಾವಳಿಯ ಪರಿಣಾಮಕಾರಿ ಪರಿಹಾರಗಳನ್ನು ಅನುಸರಿಸಿದರೆ ಸಾಕ್ಷಾತ್ ಲಕ್ಷ್ಮಿ, ಕುಬೇರರೇ ಖಜಾನೆ ತುಂಬುತ್ತಾರೆ ಎಂಬ ನಂಬಿಕೆ ಇದೆ.
ದೀಪಾವಳಿ ಪೂಜೆಯಲ್ಲಿ ಲಕ್ಷ್ಮಿ ಮತ್ತು ಗಣೇಶನ ಮೂರ್ತಿ ಮುಂದೆ 5 ಅಪರೂಪದ ಬೆಳ್ಳಿ ವಸ್ತುಗಳನ್ನಿಟ್ಟು ಕುಬೇರ ದೇವನನ್ನು ಸ್ಥಾಪಿಸಿ ಪೂಜಿಸುವುದರಿಂದ ಕುಬೇರನ ಸಂಪತ್ತೇ ಮನೆ ಪ್ರವೇಶಿಸುತ್ತದೆ.
ದೀಪಾವಳಿ ದಿನ ಪೂಜೆಯಲ್ಲಿ ಬೆಳ್ಳಿಯನ್ನೇ ಬಳಸಲು ಪ್ರಮುಖ ಕಾರಣವೆಂದರೆ ಬೆಳ್ಳಿಯನ್ನು ಶುದ್ಧ ವಸ್ತು ಎಂದು ಪರಿಗಣಿಸಲಾಗಿದೆ.
ಬೆಳ್ಳಿಯ ಕುಬೇರನಯಂತ್ರ, ಅರಿಶಿನದ ಕೊಂಬು, ಲವಂಗ, ಅಡಿಕೆ, ಏಲಕ್ಕಿ ಜೊತೆಗೆ ಗೋಮತಿ ಚಕ್ರಗಳು, ಕವಡೆಗಳನ್ನು ಇಟ್ಟು ನಿಮ್ಮ ಸಂಪ್ರದಾಯದಂತೆ ಭಕ್ತಿಯಿಂದ ಪೂಜಿಸಿ. ತುಪ್ಪಡ ದೀಪವನ್ನು ಬೆಳಗಿಸಿ.
ದೀಪಾವಳಿಯ ದಿನ ಲಕ್ಷ್ಮಿ ಪೂಜೆಯಲ್ಲಿಟ್ಟ ಈ ವಸ್ತುಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಇಟ್ಟು ನೀವು ಮನೆಯಲ್ಲಿ ಹಣ ಆಭರಣ ಇಡುವ ಜಾಗದಲ್ಲಿ ಇಟ್ಟರೆ ಇಷ್ಟಾರ್ಥಗಳು ಸಿದ್ಧಿಯಾಗಿ ಮನೆ ಹಣ ಸಂಪತ್ತಿನಿಂದ ತುಂಬಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.