ಕುಬೇರ ದೇವನ ನೆಚ್ಚಿನ ರಾಶಿಗಳಿವು.. ದೀಪಾವಳಿಯಿಂದ ಶುವಾಗಲಿದೆ ಇವರ ಶುಕ್ರದೆಸೆ, ಕೇಳಿದ್ದೆಲ್ಲ ಕೊಟ್ಟು ಕಾಯುವ ಧನದೇವ! ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆ
Rashifal Diwali: ಕುಬೇರ ದೇವ ಸಂಪತ್ತಿನ ದೇವರು. ದೀಪಾವಳಿಯಂದು, ಗಣೇಶ ಮತ್ತು ಕುಬೇರರನ್ನು ಲಕ್ಷ್ಮಿ ದೇವಿಯ ಜೊತೆಗೆ ಪೂಜಿಸಲಾಗುತ್ತದೆ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ. ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ 4 ರಾಶಿಗಳೆಂದರೆ ಕುಬೇರನಿಗೆ ಅತ್ಯಂತ ಪ್ರಿಯವಾಗಿವೆ. ಸಂಪತ್ತಿನ ದೇವರು ಕುಬೇರನ ವಿಶೇಷ ಆಶೀರ್ವಾದ ಇವರ ಮೆಲಿರುತ್ತದೆ. ಇದರಿಂದ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಸಾಲದ ಸುಳಿಯಲ್ಲಿ ಸಿಲುಕುವುದಿಲ್ಲ.
ವೃಷಭ ರಾಶಿಯ ಅಧಿಪತಿ ಶುಕ್ರ. ಈ ರಾಈಯ ಮೇಲೆ ಕುಬೇರ ದೇವ ಮತ್ತು ಲಕ್ಷ್ಮಿಯ ವಿಶೇಷ ಆಶೀರ್ವಾದವಿದೆ. ಅವರ ಜೀವನದಲ್ಲಿ ಯಾವುದೇ ಸಂಪತ್ತಿನ ಕೊರತೆ ಎಂದಿಗೂ ಬರುವುದಿಲ್ಲ.
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯು ಕುಬೇರನಿಗೆ ತುಂಬಾ ಪ್ರಿಯವಾಗಿದೆ. ಕುಬೇರನ ಕೃಪೆಯಿಂದ ಐಷಾರಾಮಿ ಜೀವನ ನಡೆಸುತ್ತಾರೆ. ಬಹಳಷ್ಟು ಹಣವನ್ನು ಗಳಿಸಿತ್ತಾರೆ.
ತುಲಾ ರಾಶಿಯ ಅಧಿಪತಿ ಶುಕ್ರ. ಕುಬೇರನು ಅವರಿಗೆ ವಿಶೇಷವಾಗಿ ದಯೆ ತೋರುತ್ತಾನೆ. ಈ ಜನರು ಬಡ ಕುಟುಂಬದಲ್ಲಿ ಜನಿಸಿದರೂ ಶ್ರೀಮಂತರಾಗುತ್ತಾರೆ. ತಮ್ಮ ಜೀವನದಲ್ಲಿ ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ.
ಧನು ರಾಶಿಯ ಅಧಿಪತಿ ಗುರು. ಈ ಜನರು ಕಠಿಣ ಪರಿಶ್ರಮ ಪಟ್ಟು ಮೇಲೆ ಬರುತ್ತಾರರೆ. ಪ್ರಾಮಾಣಿಕ ಮತ್ತು ಸತ್ಯವಂತರು. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಸಂಪತ್ತನ್ನು ಪಡೆಯುತ್ತಾರೆ.
ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.