ಎಷ್ಟೇ ಹಾಟ್‌ ಸೀನ್‌ನಲ್ಲಿ ನಟಿಸಿದ್ರೂ ಈ ನಟಿಗೆ ಕೇವಲ ಲಕ್ಷ ರೂ. ಸಂಭಾವನೆ..! ಯಾರದು..?

Sat, 06 Apr 2024-6:58 pm,

ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಿವಿನ್‌ ಪೌಲಿ ಜೊತೆ ಅನುಪಮಾ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಟಿಸಿದರು.   

ಇತ್ತೀಚಿಗೆ ಬಿಡುಗಡೆಯಾದ ಟಿಲ್ಲು 2 ಸಿನಿಮಾದಲ್ಲಿ ಅನುಪಮಾ ನಟಿಸಿದ್ದು, ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದಲ್ಲಿ ಮಲ್ಲು ಗರ್ಲ್‌ ಸಕತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಈ ಸಿನಿಮಾ ಬಿಡುಗಡೆಯಾಯಿತು.  

Tillu 2 ಸಿದ್ದು ಜೊನ್ನಲಗಡ್ಡ ಅಭಿನಯದ ಈ ಡಿಜೆ ಟಿಲ್ಲು ಸೀಕ್ವೆಲ್. ಈ ಚಿತ್ರ ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಸಧ್ಯ ಚಿತ್ರಮಂದರಿಗಳಲ್ಲಿ  ಉತ್ತಮ ಪ್ರದರ್ಶನ ಕಾಣುತ್ತಿದೆ.  

ಅನುಪಮಾ ಪರಮೇಶ್ವರನ್ ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ಫೇಮಸ್ ಆದರೂ ಕೂಡಾ ಅವರ ಸಂಭಾವನೆ ಹೆಚ್ಚಾಗಿಲ್ಲ ಎನ್ನಲಾಗಿದೆ. ಸೂಪರ್‌ ಹಿಟ್‌ ಸಿನಿಮಾ ನೀಡಿದ್ರೂ ಸಹ ನಟಿ ಸಂಭಾವನೆ ಕಡಿಮೆ ಇದೆ.  ಒಂದು ಸಿನಿಮಾಗೆ ಅನು ಕೇವಲ, 40-45 ಲಕ್ಷ ರೂಪಾಯಿ ಮಾತ್ರ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

ಇನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ನಟಸಾರ್ವಭೌಮ ಸಿನಿಮಾದ ಮೂಲಕ ಅನುಪಮಾ  ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಮಲ್ಲು ನಟಿಗೆ ಕನ್ನಡಿಗರು ಫಿದಾ ಆಗಿದ್ದರು.  

ಸಧ್ಯ ಮಲಯಾಳಿ ಚೆಲುವೆ ಇತ್ತೀಚೆಗೆ ರವಿತೇಜ ಅವರ ಈಗಲ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದಿದೆ. ಇದನ್ನು ಖ್ಯಾತ ಸಿನಿಮಾಟೋಗ್ರಾಫರ್ ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿದ್ದಾರೆ.   

ಅತಿ ಕಡಿಮೆ ಸಮಯದಲ್ಲಿ ಸೌತ್‌ ಸಿನಿರಂಗದಲ್ಲಿ ಹೆಸರು ಮಾಡಿದ ನಟಿ ಸಂಭಾವನೆ ಮಾತ್ರ ಕಡಿಮೆ ಇದೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link