ಹೀಗಿತ್ತು ಡಿಕೆ ಶಿವಕುಮಾರ್ ಪುತ್ರಿ ವಿವಾಹದ ಸಂಭ್ರಮ
ಕೆಲವು ಆಯ್ದ ಗಣ್ಯರು, ಮಠಾಧೀಶರು, ಸಂಬಂಧಿಗಳು, ಸ್ನೇಹಿತರು ಹಾಗೂ ಪರಿವಾರ ಸದಸ್ಯರ ಸಮ್ಮುಖದಲ್ಲಿ ಐಶ್ವರ್ಯಾ ಹಾಗೂ ಅಮರ್ಥ್ಯ ಸತಿಪತಿಯರಾದರು. ಫೆ. 17 ರಂದು ಪ್ರತಿಷ್ಠಿತ ಗಾಲ್ಫ್ ಶೈರ್ ಹೊಟೇಲಿನಲ್ಲಿ ಆರತಕ್ಷತೆ ನೆರವೇರಲಿದೆ.
ಅಮರ್ಥ್ಯ ಹೆಗಡೆ ರಾಜ್ಯ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ. ಎಸ್ ಎಂ ಕೃಷ್ಣ ಅವರು ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು ಹಾಗೂ ಸ್ನೇಹಿತ. ಈಗ ಎಸ್ ಎಂ ಕೃಷ್ಣ ಮತ್ತು ಡಿಕೆ ಶಿವಕುಮಾರ್ ಪರಸ್ಪರ ಬೀಗರಾಗಿದ್ದಾರೆ.
ಡಿ.ಕೆ ಶಿವಕುಮಾರ್ ಸಕಲ ಜನರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನೆರವೇರಿಸಿದರು. ಕರೋನಾ ಮಾರ್ಗಸೂಚಿಯಂತೆ ಮದುವೆ ನೆರವೇರಿತು
ಮದುವೆ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪಾಲ್ಗೊಂಡಿದ್ದರು.
ಹಲವು ಧಾರ್ಮಿಕ ನಾಯಕರೂ ಕೂಡಾ ಈ ಮದುವೆಗೆ ಆಗಮಿಸಿ ನೂತನ ದಂಪತಿಗೆ ಆಶಿರ್ವಾದ ಮಾಡಿದರು.
ವಿವಾಹ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ , ಮಾಜಿ ಸಿಎಂಗಳಾದ ಸಿದ್ದರಾಮಯ್ಯ , ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗವಹಿಸಿದ್ದರು.
ಅಮರ್ಥ್ಯ ಹೆಗಡೆ ಕಾಫಿಡೇ ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ಗ್ಲೋಬಲ್ ಇಂಜನೀಯರಿಂಗ್ ಕಾಲೇಜನ್ನು ನೋಡಿಕೊಳ್ಳುತ್ತಿದ್ದಾರೆ.
ಫೆ. 20ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದೆ.