Online Loan Fraud: ಆನ್‌ಲೈನ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಷಯಗಳು ನಿಮಗೂ ತಿಳಿದಿರಲಿ..!
ಆನ್‌ಲೈನ್ ಸಾಲವನ್ನು ತೆಗೆದುಕೊಳ್ಳುವಾಗ ಯಾವಾಗಲೂ ನೋಂದಾಯಿತ ಅಪ್ಲಿಕೇಶನ್ ಅಥವಾ ಪ್ಲಾಟ್‌ಫಾರ್ಮ್ ಅನ್ನು ಬಳಸಿ. ಯಾವುದೇ ನಕಲಿ ಅಥವಾ ಅನಧಿಕೃತ ಡಿಜಿಟಲ್ ಸಾಲ ನೀಡುವ ಪ್ಲಾಟ್‌ಫಾರ್ಮ್ ಅಥವಾ ಮೊಬೈಲ್ ಅಪ್ಲಿಕೇಶನ್ ಅನ್ನುಬಳಸಬೇಡಿ.
ನಕಲಿ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು ನಿಮಗೆ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಸಾಲವನ್ನು ನೀಡುತ್ತವೆ ಎಂದು ಹೇಳಿಕೊಳ್ಳುತ್ತವೆ. ಇಂತಹ ಯಾವುದೇ ಭ್ರಮೆಗೆ ಒಳಗಾಗಬೇಡಿ ಎಂದು ಪಿಐಬಿ ಜನರನ್ನು ಎಚ್ಚರಿಸಿದೆ.
ತಮ್ಮ KYC ದಾಖಲೆಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನು ಯಾವುದೇ ಅಪರಿಚಿತ ವ್ಯಕ್ತಿ, ಅನಧಿಕೃತ ವ್ಯಕ್ತಿ ಅಥವಾ ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳದಂತೆ PIB ಕೇಳಿದೆ.
ಯಾವುದೇ ಅಪ್ಲಿಕೇಶನ್ ಅಥವಾ ಪ್ಲಾಟ್‌ಫಾರ್ಮ್ ಮೋಸ ಮಾಡುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಸ್ಯಾಚೆಟ್ ಪೋರ್ಟಲ್‌ನಲ್ಲಿ ದೂರು ನೀಡಬಹುದು.
ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಬಳಸುವ ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ಹೆಸರನ್ನು ಬಹಿರಂಗಪಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದೆ.