ಕರೋನಾ ಲಸಿಕೆ ಹಾಕಿಸಿಕೊಳ್ಳುವ ವೇಳೆ ಈ ವಿಚಾರಗಳ ಬಗ್ಗೆ ಎಚ್ಚರವಿರಲಿ..
ವ್ಯಾಕ್ಸಿನೇಷನ್ ಗೆ ತೆರಳುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಕೋವಿಡ್ -19 ರ ಎಲ್ಲಾ ಪ್ರೋಟೋಕಾಲ್‌ಗಳನ್ನು ತಪ್ಪದೇ ಅನುಸರಿಸಬೆಕು. ಎನ್ -95 ಮಾಸ್ಕ್ ಸನ್ನು ಧರಿಸಿಯೇ ಮನೆಯಿಂದ ಹೊರಬನ್ನಿ ಜೊತೆಗೆ ಸ್ಯಾನಿಟೈಜರ್ ಅನ್ನು ಜೊತೆಯಲ್ಲಿ ಇಟ್ಟುಕೊಂಡಿರಿ.
ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಜನಸಂದಣಿ ಇದ್ದೇ ಇರುತ್ತದೆ. ಈ ವೇಳೆ, ನೂಕು ನುಗ್ಗಲು ಮಾಡದೆ ನಿಮ್ಮ ಸರದಿಗಾಗಿ ಕಾಯಿರಿ. ನಿಮ್ಮ ಸರದಿ ಬಂದಾಗ, ನೀವು ವ್ಯಾಕ್ಸಿನೇಷನ್ ಕೇಂದ್ರ ತಲುಪಿದರೆ ಇನ್ನೂ ಒಳ್ಳೆಯದು. ವ್ಯಾಕ್ಸಿನೇಷನ್ ಕೇಂದ್ರದಲ್ಲೂ ಮಾಸ್ಕ್ ಹಾಕುವುದನ್ನು ಮಾತ್ರ ಮರೆಯಬೇಡಿ..
ವ್ಯಾಕ್ಸಿನೇಷನ್ ಸಮಯದಲ್ಲಿ, ನಿಮ್ಮ ಮೆಡಿಕಲ್ ಹಿಸ್ಟರಿಯನ್ನು ವೈದ್ಯರೊಂದಿಗೆ ಚರ್ಚಿಸಿ. ನಿಮಗೆ ಒಂದು ವೇಳೆ ಔಷಧಿಯ ಅಲರ್ಜಿಯಿದ್ದರೆ, ವಾಕ್ಸಿನೇಷನ್ ನಿಂದ ಸಮಸ್ಯೆಗಳಾಗಬಹುದು. ಹಾಗಾಗಿ ವಾಕ್ಸಿನೇಷನ್ ಗೂ ಮುನ್ನ ನಿಮ್ಮ ಮೆಡಿಕಲ್ ಹಿಸ್ಟರಿಯನ್ನು ವೈದ್ಯರಿಗೆ ತಿಳಿಸಿ. ವೈದ್ಯರಿಂದ ಏನನ್ನೂ ಮುಚ್ಚಿಡಬೇಡಿ. ಮಧುಮೇಹ, ರಕ್ತದೊತ್ತಡ ರೋಗಿಗಳು ವಾಕ್ಸಿನೆಷನ್ ಗೂ ಮುನ್ನ ವೈದ್ಯರನ್ನು ಸಂಪರ್ಕಿಸಿದರೆ ಒಳ್ಳೆಯದು.
ವ್ಯಾಕ್ಸಿನೇಷನ್ ಮಾಡುವ ಸರಿಯಾಗಿ ತಿನ್ನಿ. ಮತ್ತು ಸರಿಯಾಗಿ ನಿದ್ರೆ ಮಾಡುವುದು ಕೂಡಾ ಅವಶ್ಯಕ. ಇದರ ನಂತರ, ಲಸಿಕೆ ಹಾಕಿದ ನಂತರವೂ ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಲು ಪ್ರಯತ್ನಿಸಬೇಕು. ನೀವು ಕರೋನಾ ಸೋಂಕಿಗೆ ಒಳಗಾಗಿದ್ದರೆ ಮತ್ತು ಪ್ಲಾಸ್ಮಾ ಚಿಕಿತ್ಸೆಯಿಂದ ಚಿಕಿತ್ಸೆ ನೀಡಲಾಗಿದ್ದರೆ, ಲಸಿಕೆ ಹಾಕಿಸಿಕೊಳ್ಳಲು ಕನಿಷ್ಠ ಒಂದೂವರೆ ತಿಂಗಳ ಅಂತರವಿರಬೇಕು.