ಊಟವಾದ ನಂತರ ಈ 5 ಕೆಲಸಗಳನ್ನು ಮಾಡಲೇಬೇಡಿ
ಕೆಲವರು ಊಟವಾದ ತಕ್ಷಣ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಇದು ನೀವು ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆ ಉಂಟುಮಾಡಬಹುದು.
ನೀವು ಜಿಮ್ ಅಥವಾ ವ್ಯಾಯಾಮ ಮಾಡುವುದಾದರೆ ಊಟ ಮಾಡುವ ಒಂದೆರಡು ಗಂಟೆ ಮೊದಲು ಇಲ್ಲವೇ ನಂತರ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ, ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.
ಕೆಲವರು ಊಟವಾದ ತಕ್ಷಣ ಒಂದು ಕಪ್ ಚಹಾ ಇಲ್ಲವೇ ಕಾಫಿ ಕುಡಿಯಲು ಇಚ್ಚಿಸುತ್ತಾರೆ. ಆದರೆ, ಇದರಿಂದ ದೇಹವು ಆಹಾರದಿಂದ ತೆಗೆದುಕೊಂಡ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ.
ಊಟ ಮಾಡಿದ ಬಳಿಕ ಧೂಮಪಾನ ಮಾಡುವುದು ಕೆಲವರ ಅಭ್ಯಾಸ. ಆದರೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಊಟ ಮಾಡಿದ ಬಳಿಕ ತಕ್ಷಣ ಹಣ್ಣುಗಳನ್ನು ಸೇವಿಸುವುದರಿಂದ ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ನೀವು ಹಣ್ಣುಗಾನ್ನು ಸೇವಿಸುವುದಾದರೆ ಊಟ ಮಾಡುವ ಒಂದು ಗಂಟೆ ಮೊದಲು, ಇಲ್ಲವೇ ನಂತರ ಸೇವಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.