ಸಂಕಷ್ಟಹರ ಚತುರ್ಥಿಯ ದಿನ ಈ ತಪ್ಪುಗಳನ್ನು ಮಾಡಲೇಬಾರದು!
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ಮಾಸದಲ್ಲಿ ಎರಡು ಚತುರ್ಥಿ ತಿಥಿಗಳಿರುತ್ತವೆ ಇದರಲ್ಲಿ ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿ ಎಂದೂ ಶುಕ್ಲ ಪಕ್ಷದ ಚತುರ್ಥಿ ತಿಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ.
ಸೋಮವಾರ, ಜನವರಿ 29, 2024 ರಂದು ಸಂಕಷ್ಟಹರ ಚತುರ್ಥಿ ಇರಲಿದೆ. ಸನಾತನ ಧರ್ಮದಲ್ಲಿ, ಈ ಸಂಕಷ್ಟಹರ ಚತುರ್ಥಿಯ ದಿನ ಉಪವಾಸ ಆಚರಣೆಗೆ ಬಹಳ ಮಹತ್ವವಿದೆ. ಈ ದಿನ ಉಪವಾಸ ಆಚರಿಸಿ ಗಣೇಶನನ್ನು ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಎದುರಾಗಿರುವ ಕಷ್ಟಗಳಿಂದ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತದೆ.
ಸಂಕಷ್ಟಹರ ಚತುರ್ಥಿಯಲ್ಲಿ ಕೆಲವು ತಪ್ಪುಗಳನ್ನು ಮಾಡಲೇಬಾರದು: ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣೇಶನನ್ನು ಮೆಚ್ಚಿಸಲು ಬಹಳ ಪವಿತ್ರ ದಿನ ಎಂದು ಪರಿಗಣಿಸಲಾಗಿರುವ ಸಂಕಷ್ಟಹರ ಚತುರ್ಥಿಯ ದಿನ ಕೆಲವು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಗಣಪತಿಗೆ ಕೋಪ ಬರಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ದಿನ ಯಾವ ರೀತಿಯ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕು ತಿಳಿಯೋಣ...
ಪ್ರಾಣಿ ಹಿಂಸೆ: ಪ್ರಾಣಿಗಳನ್ನು ಎಂದಿಗೂ ಹಿಂಸಿಸಬಾರದು. ಅದರಲ್ಲೂ ಸಂಕಷ್ಟಹರ ಚತುರ್ಥಿಯ ದಿನ ನೀವು ಉಪವಾಸ ವ್ರತವನ್ನು ಆಚರಿಸುತ್ತಿದ್ದರೆ ಅಪ್ಪಿತಪ್ಪಿಯೂ ಸಹ ಪ್ರಾಣಿ ಹಿಂಸೆಯನ್ನು ಮಾಡಬೇಡಿ. ಅದರಲ್ಲೂ, ಗಣೇಶನ ವಾಹನ ಇಲಿಯನ್ನು ತೊಂದರೆಗೊಳಿಸಬೇಡಿ.
ಗಣೇಶನ ಪೂಜೆಯಲ್ಲಿ ಇದು ಇರಲೇಬಾರದು: ಗಣೇಶನನ್ನು ಪೂಜಿಸುವಾಗ ದೂರ್ವಾವನ್ನು ಅರ್ಪಿಸಿದರೆ ಶುಭ ಎಂದು ಹೇಳಲಾಗುತ್ತದೆ. ಚೌತಿ ಪೂಜೆಯಲ್ಲಿ ಗಣೇಶನಿಗೆ ದೂರ್ವಾ, ವೀಳ್ಯದೆಲೆ, ಹೂವು, ಮೋದಕ, ಲಡ್ಡುಗಳನ್ನು ಅರ್ಪಿಸಿ. ಆದರೆ ತಪ್ಪಾಗಿಯೂ ಸಹ ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು.
ಈ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ: ಗಣೇಶ ಚತುರ್ಥಿಯ ದಿನ ಅಪ್ಪಿತಪ್ಪಿಯೂ ಸಹ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಈ ದಿನ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.
ಚಂದ್ರನಿಗೆ ಅರ್ಘ್ಯ: ಗಣೇಶ ಚತುರ್ಥಿಯ ದಿನ ಚಂದ್ರ ದೇವರಿಗೆ ಅರ್ಘ್ಯವನ್ನು ಅರ್ಪಿಸದೆ ಸಂಕಷ್ಟ ಚತುರ್ಥಿಯ ಪೂಜೆ ಅಪೂರ್ಣ. ಹಾಗಾಗಿ, ಪೂಜೆ ನಂತರ ಚಂದ್ರನಿಗೆ ಅರ್ಘ್ಯ ಅರ್ಪಿಸುವುದನ್ನು ಮರೆಯಬೇಡಿ.
ಸಾತ್ವಿಕ ಆಹಾರ: ಗಣೇಶ ಚತುರ್ಥಿಯ ದಿನ ಉಪವಾಸ ಆಚರಿಸುವವರು ರಾತ್ರಿ ಚಂದ್ರೋದಯ ನಂತರ ಚಂದ್ರನಿಗೆ ಅರ್ಘ್ಯ ಅರ್ಪಿಸಿದ ನಂತರವಷ್ಟೆ ಆಹಾರ ಸೇವಿಸಬೇಕು. ಅದರಲ್ಲೂ, ನೀವು ಉಪವಾಸ ಮುರಿಯುವಾಗ ಕೇವಲ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು ಎಂಬುದನ್ನು ಮರೆಯಬೇಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.