ರೈಲ್ವೆ ನಿಲ್ದಾಣದಲ್ಲಿ ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಲೇಬಾರದು
ರೈಲು ಪ್ರಯಾಣ ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲ, ಆರಾಮದಾಯಕ ಪ್ರಯಾಣದಿಂದಾಗಿಯೂ ಸಹ ಹೆಚ್ಚು ಜನಪ್ರಿಯವಾಗಿದೆ. ಆದರೆ, ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೆಲವು ವಿಷಯಗಳಲ್ಲಿ ಸ್ವಲ್ಪ ಅಸಡ್ಡೆ ತೋರಿದರೂ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿಯಾಗಬಹುದು. ಇದನ್ನು ತಪ್ಪಿಸಲು ನೀವು ರೈಲಿನಲ್ಲಿ ಮತ್ತು ರೈಲು ನಿಲ್ದಾಣದಲ್ಲಿ ಯಾವುದೇ ಕಾರಣಕ್ಕೂ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಅವುಗಳೆಂದರೆ...
ರೈಲಿನಲ್ಲಿ ಪ್ರಯಾಣಿಸುವಾಗ ನೆಟ್ವರ್ಕ್ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ನೀವು ರೈಲಿಗೆ ಹತ್ತಿದಾಗ ನೀವು ಯಾವುದೇ ಪಾಸ್ವರ್ಡ್ ಇಲ್ಲದ ತೆರೆದ ವೈಫೈ ಕಂಡರೆ ಅದನ್ನು ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬೇಡಿ. ಏಕೆಂದರೆ ಅದು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು.
ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ನಲ್ಲಿ ನಿಮ್ಮ ಫೋನ್ ಅನ್ನು ಎಂದಿಗೂ ಚಾರ್ಜ್ ಮಾಡಬಾರದು. ರೈಲ್ವೆ ನಿಲ್ದಾಣದಲ್ಲಿ ಅಲ್ಲಿಯೇ ಅಳವಡಿಸಲಾಗಿರುವ ಕೇಬಲ್ ಚಾರ್ಜ್ ಬಳಸಿ ನಿಮ್ಮ ಫೋನ್ ಚಾರ್ಜ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ.
ವಾಸ್ತವವಾಗಿ ಅನೇಕ ಬಾರಿ ಸ್ಕ್ಯಾಮರ್‌ಗಳು ಈ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಪ್ರಯಾಣಿಕರನ್ನು ಮೋಸ ಮಾಡಿ ಅವರ ಫೋನ್‌ಗಳಿಂದ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ. ಇದು ನಿಮ್ಮ ಬ್ಯಾಂಕಿಂಗ್ ಮಾಹಿತಿ ಸೇರಿದಂತೆ ಫೋನ್‌ನಲ್ಲಿ ಸೇವ್ ಮಾಡಲಾಗಿರುವ ನಿಮ್ಮ ವೈಯಕ್ತಿಕ ಮಾಹಿತಿ ಕಳುವಿಗೆ ಕಾರಣವಾಗಬಹುದು.
ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿರಿಸಲು ಬಯಸಿದರೆ ರೈಲ್ವೆ ನಿಲ್ದಾಣದಲ್ಲಿ ಬೇರೆಯವರಿಂದ ಅದರಲ್ಲೂ ಅಪರಿಚಿತರಿಂದ ಯಾವುದೇ ಕಾರಣಕ್ಕೂ ಹಾಟ್‌ಸ್ಪಾಟ್ ಪಡೆಯಬೇಡಿ. ಇದರಿಂದ ನೀವು ಸುಲಭವಾಗಿ ಹ್ಯಾಕರ್‌ಗಳ ಬಲೆಗೆ ಬೀಳಬಹುದು. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಈ ಎಲ್ಲಾ ವಿಚಾರಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ.