Astrology: ಬುಧವಾರದಂದು ನೀವು ಮಾಡುವ ಈ ಕೆಲಸದಿಂದ ಆರ್ಥಿಕ ನಷ್ಟ ಸಂಭವಿಸಬಹುದು!

Wed, 20 Oct 2021-10:20 am,

ಬುಧವಾರದಂದು ಯಾವುದೇ ರೀತಿಯ ಹೂಡಿಕೆಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಬುಧವಾರ ಹೂಡಿಕೆ ಮಾಡದಿದ್ದರೆ ಒಳಿತು ಎಂದು ಹೇಳಲಾಗುತ್ತದೆ. ಏಕೆಂದರೆ ಈ ದಿನ ಮಾಡಿದ ಹೂಡಿಕೆಯು ನಷ್ಟವನ್ನು ಉಂಟುಮಾಡುತ್ತದೆ. ಅಥವಾ ಈ ದಿನ ಯಾರೊಂದಿಗೂ ಕ್ರೆಡಿಟ್ ವಹಿವಾಟುಗಳನ್ನು ಮಾಡಬಾರದು. ಬುಧವಾರ ನೀಡಿದ ಸಾಲ ಸುಲಭವಾಗಿ ಕೈಸೇರುವುದಿಲ್ಲ ಮತ್ತು ತೆಗೆದುಕೊಂಡ ಸಾಲವನ್ನು ಮರುಪಾವತಿಸುವಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ.

ಕಪ್ಪು ಬಟ್ಟೆಗಳನ್ನು ಧರಿಸಬೇಡಿ: ಬುಧವಾರ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದು ತುಂಬಾ ಅಶುಭಕರ. ವಿಶೇಷವಾಗಿ ಮಹಿಳೆಯರು ಕಪ್ಪು ಬಟ್ಟೆಗಳನ್ನು ಧರಿಸಬಾರದು. 

ಕೆಟ್ಟ ಪದಗಳನ್ನು ಬಳಸಬೇಡಿ: ಎಂದಿಗೂ ಕೂಡ ಬೇರೆಯವರೊಂದಿಗೆ ಮಾತನಾಡುವಾಗ ನಿಂದನಾತ್ಮಕ ಪದಗಳನ್ನು ಬಳಸಬಾರದು. ಆದರೆ ವಿಶೇಷವಾಗಿ ಬುಧವಾರ, ಇದನ್ನು ಮಾಡಬಾರದು.

ಇದನ್ನೂ ಓದಿ- Karwa Chauth 2021: ಕರ್ವಾ ಚೌತ್‌ನಲ್ಲಿ ವಿಶೇಷ ಸಂಯೋಗ; ಈ ರೀತಿ ವ್ರತಾಚರಣೆಯಿಂದ ಇಷ್ಟಾರ್ಥ ಸಿದ್ಧಿ ಪ್ರಾಪ್ತಿ

ಈ ದಿಕ್ಕಿಗೆ ಪ್ರಯಾಣಿಸಬೇಡಿ: ಬುಧವಾರ ಪಶ್ಚಿಮ ದಿಕ್ಕಿಗೆ ಪ್ರಯಾಣಿಸಬೇಡಿ. ಅಂತಹ ಪ್ರಯಾಣವು ಹಾನಿಯನ್ನು ಉಂಟುಮಾಡುತ್ತದೆ. 

ಇದನ್ನೂ ಓದಿ- Lucky Zodiac Sign: ಈ ರಾಶಿಯ ಜನ ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು, ನೀವು ಸಹ ಭಾಗಿಯಾಗಿದ್ದೀರಾ!

ತಾಯಿಯಂದಿರು ತಲೆಗೆ ಸ್ನಾನ ಮಾಡಬಾರದು: ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಂದಿರು ಬುಧವಾರ ತಮ್ಮ ಕೂದಲನ್ನು ತೊಳೆಯಬಾರದು. ಇದು ಅವರ ಮಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. (ಎಲ್ಲಾ ಫೋಟೋಗಳು ಸಾಂದರ್ಭಿಕ ಚಿತ್ರಗಳಾಗಿವೆ) 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link