ಸಂಜೆ ಹೊತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ಬಡತನ ಮತ್ತು ದಾರಿದ್ರ್ಯ ಬರುತ್ತೆ ಹುಷಾರ್!
ಸಂಜೆ ಹೊತ್ತು ಯಾರಾದರೂ ನಿಮ್ಮ ಬಳಿ ಸಾಲ ಅಥವಾ ದಾನವಾಗಿ ಹಣ ಕೊಡಿ ಎಂದು ಕೇಳಲು ಬಂದರೆ ಯಾವುದೇ ಕಾರಣಕ್ಕೂ ಕೊಡಬೇಡಿ. ಸಂಜೆ ಹಣ ಕೊಡುವುದರಿಂದ ನಿಮಗೆ ದಾರಿದ್ರ್ಯ ಬರುವ ಸಂಭವವಿರುತ್ತದೆ. ಸಂಜೆ ಹೊತ್ತು ತಾಯಿ ಲಕ್ಷ್ಮೀದೇವಿ ಮನಗೆ ಬರುವ ಸಮಯ. ಈ ಸಮಯದಲ್ಲಿ ಹಣ ಕೊಡುವುದು ಎಂದರೆ ಸಂಪತ್ತನ್ನು ಹೊರಗೆ ಹಾಕಿದಂತೆ.
ಸಂಜೆ ಹೊತ್ತು ಹಾಲು ಅಥವಾ ಹಾಲಿನ ಉತ್ಪನ್ನವನ್ನು ಯಾರೇ ಕೇಳಿದರೂ ಕೊಡಲು ಹೋಗಬೇಡಿ. ಇವೆರಡೂ ಸಮೃದ್ಧಿಯ ಸಂಕೇತ. ಸಂಜೆ ಹೊತ್ತಿಗೆ ಇವನ್ನು ಕೊಟ್ಟರೆ ನಿಮ್ಮ ಸಮೃದ್ಧಿಯನ್ನು ಬೇರೆಯವರಿಗೆ ದಾನ ಮಾಡಿದಂತೆ. ಇದರಿಂದ ನಿಮ್ಮ ಮನೆಗೆ ಬಡತನ ಬರಬಹುದು.
ಸಂಜೆ ಹೊತ್ತು ಅಪ್ಪಿತಪ್ಪಿಯೂ ತುಳಸಿ ಕೊಯ್ಯುವುದಿರಲಿ, ಮುಟ್ಟಲೂ ಹೋಗಬೇಡಿ. ಈ ಹೊತ್ತಿನಲ್ಲಿ ತುಳಸಿ ಮುಟ್ಟಲು ಹೋದರೆ ಋಣಾತ್ಮಕ ಶಕ್ತಿ ಹೆಚ್ಚಬಹುದು. ಮನೆಯಲ್ಲಿ ಸಮೃದ್ಧಿ ನಾಶವಾಗಬಹುದು. ಅದರ ಬದಲು ಈ ಹೊತ್ತಿನಲ್ಲಿ ತುಳಸಿಗೆ ದೀಪವಿಟ್ಟು ವಂದಿಸಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ.