ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!! ಒಳ್ಳೆಯದಲ್ಲ.. ಯಾಕೆ ಗೊತ್ತಾ?
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಟೊಮೇಟೊವನ್ನು ತಿನ್ನಬಾರದು ಯಾಕೆಂದರೆ ಇದು ಹೆಚ್ಚು ಆಮ್ಲೀಯ ಆಹಾರಗಳಲ್ಲಿ ಒಂದಾಗಿದೆ.
ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಕ್ಕರೆ ಹೊಂದಿರುವ ಆಹಾರ ಸೇವಿಸುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ದೇಹದಲ್ಲಿನ ಇನ್ಸುಲಿನ್ ಪ್ರತಿರೋಧ ಹೆಚ್ಚಾಗುತ್ತದೆ.
ಮಸಾಲೆಯುಕ್ತ ಆಹಾರ ತಿನ್ನುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ ಮತ್ತು ಆಸಿಡ್ ರೆಫ್ಲೆಕ್ಸ್ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ಅಲ್ಸರ್ ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಕಾರ್ಬೋನೇಟೆಡ್ ಡ್ರಿಂಕ್ಸ್ ಗಳನ್ನು ಮತ್ತು ಸೋಡಾ ಆಹಾರಗಳನ್ನು ಸೇವಿಸಬಾರದು ಇದರಿಂದ ಆಮ್ಲ ಉತ್ಪಾದನೆ ಹೆಚ್ಚಾಗುತ್ತದೆ
ಖಾಲಿ ಹೊಟ್ಟೆಯಲ್ಲಿ ಮೊಸರನ್ನು ತಿನ್ನಬಾರದು ಇದರಿಂದ ಅಸ್ವಸ್ಥತೆ ಉಂಟಾಗಿ ಹೊಟ್ಟೆಯಲ್ಲಿ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು
ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದು ಒಳ್ಳೆಯದಲ್ಲ ಇದರಿಂದ ಪಿತ್ತ ಉಂಟಾಗುತ್ತದೆ ಮತ್ತು ಎದೆ ಉರಿ, ಜಠರದಲ್ಲಿ ಉರಿಯುವುದು ಪ್ರಾರಂಭವಾಗುತ್ತದೆ