ಶೀತ-ನೆಗಡಿ-ಕೆಮ್ಮು ಇದ್ದರೆ ಮರೆತೂ ಸಹ ಈ ಹಣ್ಣುಗಳನ್ನು ತಿನ್ನಬೇಡಿ

Tue, 24 Jan 2023-2:56 pm,

ಮಳೆಗಾಲ, ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳೆಂದರೆ ಶೀತ-ನೆಗಡಿ-ಕೆಮ್ಮು. ಈ ಸಮಯದಲ್ಲಿ ನಾವು ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಆರೋಗ್ಯ ತಜ್ಞರ ಪ್ರಕಾರ, ಶೀತ-ನೆಗಡಿ-ಕೆಮ್ಮು ಇರುವ ಸಂದರ್ಭದಲ್ಲಿ ಕೆಲವು ಹಣ್ಣುಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಆ ಹಣ್ಣುಗಳು ಯಾವುವು ತಿಳಿಯೋಣ...  

ಪ್ರತಿ ಋತುವಿನಲ್ಲೂ ಸುಲಭವಾಗಿ ಲಭ್ಯವಾಗುವ ಬಾಳೆಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ. ಪೋಷಕಾಂಶಗಳ ಆಗರವೂ ಹೌದು. ಆದರೆ, ಶೀತ-ನೆಗಡಿ ಇದ್ದಾಗ ಬಾಳೆಹಣ್ಣು ಸೇವಿಸುವುದರಿಂದ ಕಫ ಹೆಚ್ಚಾಗಬಹುದು.

ನಿಂಬೆ, ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಶೀತ ಇದ್ದಾಗ ಈ ಹಣ್ಣುಗಳ ಸೇವನೆಯು ಕೆಮ್ಮಿನ ಸಮಸ್ಯೆಯನ್ನು ಉಲ್ಬಣಿಸುತ್ತದೆ.

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೀಬೆ ಹಣ್ಣು ಆರೋಗ್ಯಕ್ಕೆ ತುಂಬಾ ಲಾಭದಾಯಕ. ಆದರೆ, ಇದು ಕೆಮ್ಮಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. 

ಶೀತ ವಾತಾವರಣದಲ್ಲಿ ಕಬ್ಬಿನ ಜ್ಯೂಸ್ ಸೇವನೆಯು ಅದರಲ್ಲೂ ಶೀತ-ನೆಗಡಿ-ಕೆಮ್ಮು ಇರುವ ಸಂದರ್ಭದಲ್ಲಿ ಕಬ್ಬು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link