Unhealthy Food Habits: ತಪ್ಪಿಯೂ ಈ ಆಹಾರ ಪದ್ಧತಿ ಅನುಸರಿಸದಿರಿ, ಕೆಡಬಹುದು ಹಲ್ಲುಗಳ ಆರೋಗ್ಯ

Sat, 24 Jul 2021-5:33 pm,

ಕಪ್ ಕೇಕ್ ಗಳು, ಡೊನಟ್ ನಂಥಹ ಸಕ್ಕರೆ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇದು ನಿಮ್ಮ ಹಲ್ಲುಗಳ ಹುಳುಕಿಗೆ ಕಾರಣವಾಗುತ್ತದೆ.

 ಸೋಡಾ, ಸಿಹಿ ಪಾನೀಯ, ಎನರ್ಜಿ ಡ್ರಿಂಕ್ಸ್ ಗಳಿಂದ ಹಲ್ಲುಗಳಿಗೆ ಹಾನಿಯುಂಟಾಗಬಹುದು. ಅಲ್ಲದೆ, ಈ ಆಹಾರಗಳು, ಬೊಜ್ಜು, ಹೃದ್ರೋಗಗಳಂಥಹ ಸಮಸ್ಯೆಗಳನ್ನೂ ಉಂಟುಮಾಡಬಹುದು. ಈ  ಪಾನೀಯಗಳು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತವೆ ಮತ್ತು ಹಲ್ಲಿನ ಹೊರ ಪದರವನ್ನು ಹಾನಿಗೊಳಿಸುತ್ತವೆ. ಇದರಲ್ಲಿರುವ ಆಸಿಡ್ ಗಳು ದೇಹದೊಳಗಿನ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ದಂತಕವಚವನ್ನು ಹಾನಿಗೊಳಿಸುತ್ತದೆ. ಈ ಪಾನೀಯವನ್ನು ಕುಡಿದ ತಕ್ಷಣ ಬ್ರಷ್ ಮಾಡಬೇಕು .  

ಬೇಕ್ ಮಾಡಿದ ಸಿಹಿತಿಂಡಿಗಳು ಹಲ್ಲು ಮತ್ತು ಒಸಡುಗಳ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ. ಕೇಕ್ ಮತ್ತು ಪೇಸ್ಟ್ರಿಗಳಂತಹ ವಸ್ತುಗಳನ್ನು ಬೆಳಿಗ್ಗೆ ತಿನ್ನುವುದನ್ನು ಆದಷ್ಟು ತಪ್ಪಿಸಿ.   

ವೈಟ್  ಬ್ರೆಡ್, ಆಲೂಗೆಡ್ಡೆ ಚಿಪ್ಸ್ ಗಳನ್ನೂ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿರುವ ಸಂಸ್ಕರಿಸಿದ ಕಾರ್ಬ್ಸ್ ಮತ್ತು ಸ್ಟಾರ್ಚ್  ಹಲ್ಲುಗಳಿಗೆ ಹಾನಿ ಮಾಡುತ್ತದೆ. ವೈಟ್ ಬ್ರೆಡ್ ಮತ್ತು ಚಿಪ್ಸ್  ಹಲ್ಲುಗಳ ಹುಳುಕು ಹೆಚ್ಚಿಸಲು ಕಾರಣವಾಗುತ್ತದೆ. 

ಶುಗರ್  ಕ್ಯಾಂಡಿ ಅಥವಾ ಹೆಚ್ಚಿಗೆ ಸಕ್ಕರೆ ತಿನ್ನುವುದರಂದ ಕೂಡಾ ಹಲ್ಲುಗಳಿಗೆ ಹಾನಿ ಮಾಡುತ್ತದೆ. ಇದು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಸೃಷ್ಟಿಸುತ್ತದೆ. ನೈಸರ್ಗಿಕವಾಗಿರುವ ಸಿಹಿ ಪದಾರ್ಥಗಳಾದ ಡೈರಿ ಉತ್ಪನ್ನಗಳು ಮತ್ತು ಹಣ್ಣುಗಳು ಫೈಬರ್ ಮತ್ತು ಖನಿಜಗಳನ್ನು ಹೊಂದಿರುತ್ತವೆ.  ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಅಥವಾ ಟೇಬಲ್ ಶುಗರ್ ಬಾಯಿಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link