Shani Dev: ಮರೆತೂ ಕೂಡ ಈ ವಸ್ತುಗಳನ್ನು ಉಚಿತವಾಗಿ ಪಡೆಯಬೇಡಿ, ಕಾರಣ ಇಲ್ಲಿದೆ
1. ಶನಿ ದೇವನನ್ನು ಪ್ರಸನ್ನಗೊಳಿಸಲು ಆತನಿಗೆ ಕಪ್ಪು ಉದ್ದಿನ ಬೆಲೆಯನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಸಿಗುತ್ತದೆ. ಆದರೆ, ಉದ್ದಿನ ಬೇಳೆಯನ್ನು ಎಂದಿಗೂ ಕೂಡ ಉಚಿತವಾಗಿ ಪಡೆದು ಮನೆಗೆ ತರಬೇಡಿ, ಇದರಿಂದ ಶನಿ ಮುನಿಸಿಕೊಳ್ಳುತ್ತಾನೆ.
2. ಶನಿವಾರದ ದಿನ ಶನಿಯ ಮುಂದೆ ಸಾಸಿವೆ ಎಣ್ಣೆ ದೀಪ ಉರಿಸುವುದು ಎಂದಿಗೂ ಕೂಡ ಶುಭ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಉಚಿತವಾಗಿ ಎಂದಿಗೂ ಕೂಡ ಪಡೆಯಬೇಡಿ. ಇದರಿಂದ ನಿಮಗೆ ಶನಿಯ ಅಶುಭ ದೆಸೆ ಎದುರಾಗುವ ಸಾಧ್ಯತೆ ಇರುತ್ತದೆ.
3. ಶನಿವಾರದ ದಿನ ಕಬ್ಬಿಣ ಖರೀದಿ ಮತ್ತು ಮಾರಾಟ ಮಾಡಬಾರದು. ಇದರಿಂದ ನೀವು ಶನಿಯ ಕೆಟ್ಟ ದೃಷ್ಟಿ ಎದುರಿಸಬೇಕಾಗಬಹುದು ಹಾಗೂ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳು ಎದುರಾಗಬಹುದು.
4. ಕಪ್ಪು ಎಳ್ಳನ್ನು ಉಚಿತವಾಗಿ ಪಡೆಯುವುದರಿಂದ ಶನಿಯ ನಕಾರಾತ್ಮಕ ದೃಷ್ಟಿ ನಿಮ್ಮ ಮೇಲಾಗುವ ಸಾಧ್ಯತೆ ಇದೆ. ಹೀಗಾಗಿ ಎಳ್ಳನ್ನು ಎಂದಿಗೂ ಕೂಡ ಫ್ರೀಯಾಗಿ ಪಡೆದುಕೊಳ್ಳಬೇಡಿ.
5. ಯಾವುದೇ ಓರ್ವ ವ್ಯಕ್ತಿಯಿಂದ ನೀವು ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಂಡರೆ. ಅವರಿಗೆ ಅವರ ಕೆಲಸದ ಪ್ರತಿಯಾಗಿ ನೀಡಲಾಗುವ ಶುಲ್ಕವನ್ನು ಕೊಟ್ಟು ಕಳುಹಿಸಿ. ಈ ರೀತಿ ಮಾಡದೆ ಹೋದರೆ ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಯಾರಿಂದಲೂ ಉಚಿತ ಸೇವೆ ಪಡೆಯುವುದು ಶನಿಗೆ ಇಷ್ಟವಾಗುವುದಿಲ್ಲ.