ಮನೆಯಲ್ಲಿ ಎಂದಿಗೂ ಈ ಐದು ವಸ್ತುಗಳನ್ನು ಇಡಲೇ ಬೇಡಿ , ದುರಾದೃಷ್ಟವನ್ನು ಹೊತ್ತು ತರುತ್ತದೆಯಂತೆ
ವಾಸ್ತು ಸಲಹೆಗಳ ಪ್ರಕಾರ, ಬಟ್ಟೆಗಳು ಅದೃಷ್ಟಕ್ಕೆ ಸಂಬಂಧಿಸಿವೆ. ಒಳ್ಳೆಯ ಬಟ್ಟೆಗಳು ಅದೃಷ್ಟದ ಸಂಕೇತ. ಹಳೆಯ ಕೊಳಕು ಬಟ್ಟೆಗಳು ದುರದೃಷ್ಟಕರ. ಹಳೆಯ ತೊಳೆಯದ ಬಟ್ಟೆಗಳು ಮನೆಯೊಳಗೆ ಇದ್ದರೆ, ತಕ್ಷಣವೇ ಅವುಗಳನ್ನು ಹೊರತೆಗೆಯಿರಿ. ಹರಿದ ಹಳೆಯ ಬಟ್ಟೆಗಳು ಕೂಡಾ ದುರಾದೃಷ್ಟವನ್ನು ತರುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಹಳೆಯ ಪತ್ರಿಕೆಗಳನ್ನು ಎಂದಿಗೂ ಮನೆಯೊಳಗೆ ಇಡಬಾರದು. ಮನೆಯಲ್ಲಿ ಬಿದ್ದಿರುವ ಕಸದ ರಾಶಿಯು ಯಾವಾಗಲೂ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಇದು ಕುಟುಂಬದ ಸದಸ್ಯರ ಪ್ರಗತಿಯನ್ನು ನಿಲ್ಲಿಸುತ್ತದೆ. ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಧರ್ಮಗ್ರಂಥಗಳ ಪ್ರಕಾರ, ದೇವರು ಮತ್ತು ದೇವತೆಗಳ ವಿಗ್ರಹ ಅಥವಾ ಚಿತ್ರವು ಧನಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ, ಆದರೆ ಅವುಗಳು ಮುರಿದಿದ್ದರೆ, ಋಣಾತ್ಮಕ ಶಕ್ತಿಯು ಅವುಗಳಲ್ಲಿ ವಾಸಿಸುತ್ತದೆ. ಆದ್ದರಿಂದ ಮುರಿದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬೇಡಿ.
ನಿಮ್ಮ ಮನೆಯಲ್ಲಿ ಹಳೆಯ ಮುರಿದ ಬೀಗಗಳಿದ್ದರೆ, ಅದನ್ನು ತಕ್ಷಣವೇ ಮನೆಯಿಂದ ಹೊರ ಹಾಕಿ. ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ಮುರಿದ ಬೀಗಗಳನ್ನು ಎಂದಿಗೂ ಮನೆಯೊಳಗೆ ಇಡಬಾರದು. ವಾಸ್ತು ಶಾಸ್ತ್ರದಲ್ಲಿ ಇಂಥಹ ಬೀಗಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಹಳೆಯ ಅಥವಾ ಮುರಿದ ಬೀಗವು ದುರಾದೃಷ್ಟದ ವಾಹಕವಾಗಿರುತ್ತದೆ.
ಕೆಟ್ಟು ನಿಂತಿರುವ ಗಡಿಯಾರವನ್ನು ಎಂದಿಗೂ ಮನೆಯೊಳಗೆ ಇರಿಸಬೇಡಿ. ಚಲಿಸದ ಗಡಿಯಾರವು ದುರದೃಷ್ಟದ ಸಂಕೇತವಾಗಿದೆ. ಇದು ಮನೆ ಮಂದಿಯ ಕೆಲಸಗಳನ್ನು ಸ್ಥಗಿತಗೊಳಿಸುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಕೆಟ್ಟು ನಿಂತಿರುವ ಗಡಿಯಾರಗಳನ್ನು ಇಟ್ಟುಕೊಂಡರೆ ವ್ಯಕ್ತಿಯ ಅದೃಷ್ಟವೂ ನಿಲ್ಲುತ್ತದೆ.