ಅಪ್ಪಿತಪ್ಪಿಯೂ ಪರ್ಸ್`ನಲ್ಲಿ ಈ ವಸ್ತುಗಳನ್ನು ಇಡಬೇಡಿ: ಎಷ್ಟೇ ದುಡಿದರೂ ಸಂಪಾದನೆ ಕೈಸೇರಲ್ಲ; ಅರ್ಧ ಆಯಸ್ಸನ್ನೇ ನುಂಗಿಬಿಡುತ್ತೆ!
ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಇರಿಸಲಾಗಿರುವ ಎಲ್ಲ ವಸ್ತುಗಳಿಗೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ವಿಶೇಷವೆಂದರೆ, ವಾಸ್ತು ಪ್ರಕಾರ, ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯು ಅವನು ತನ್ನ ಪರ್ಸ್ʼನಲ್ಲಿ ಏನನ್ನು ಇಟ್ಟುಕೊಂಡಿರುತ್ತಾನೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆಯಂತೆ.
ವಾಸ್ತುವಿನಲ್ಲಿ ಪರ್ಸ್ʼಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಸಹ ಮಾಡಲಾಗಿದೆ. ಇದರ ಪ್ರಕಾರ ಕೆಲವು ವಿಷಯಗಳು ನಿಮಗೆ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು. ಅಷ್ಟಕ್ಕೂ ಪರ್ಸ್ʼನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದರ ಬಗ್ಗೆ ತಿಳಿಯೋಣ.
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಹಳೆಯ ಬಿಲ್ ಅನ್ನು ತಪ್ಪಿಯೂ ಪರ್ಸ್ʼಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಹದಗೆಡಬಹುದು. ಅನಾವಶ್ಯಕ ವಸ್ತುಗಳನ್ನು ಪರ್ಸ್ʼನಲ್ಲಿ ಇಟ್ಟುಕೊಳ್ಳುವುದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳಿಸುತ್ತದೆ. ಹೀಗಾಗಿ ಪರ್ಸ್ʼನಲ್ಲಿಟ್ಟ ಹಳೆಯ ಪೇಪರ್ʼಗಳನ್ನು ಹೊರಗೆಸೆಯಿರಿ.
ಯಾವುದೇ ಜೀವಂತ ಅಥವಾ ಸತ್ತ ವ್ಯಕ್ತಿಯ ಭಾವಚಿತ್ರವನ್ನು ಪರ್ಸ್ʼನಲ್ಲಿ ಇಡಬಾರದು. ಅಷ್ಟೇ ಅಲ್ಲದೆ ವಾಸ್ತು ಪ್ರಕಾರ, ಪರ್ಸ್ʼನಲ್ಲಿ ಯಾವುದೇ ದೇವತೆಗಳ ಫೋಟೋಗಳನ್ನು ಸಹ ಇಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ವ್ಯಕ್ತಿಯ ಸಾಲ ಹೆಚ್ಚಾಗುತ್ತದೆ ಮತ್ತು ವಾಸ್ತು ದೋಷಗಳು ಉಂಟಾಗುತ್ತವೆ.
ಪರ್ಸ್ʼನಲ್ಲಿ ನೋಟು ಮತ್ತು ನಾಣ್ಯಗಳನ್ನು ಯಾವತ್ತಿಗೂ ಒಟ್ಟಿಗೆ ಇಡಬೇಡಿ. ಹೀಗೆ ಇಟ್ಟರೆ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ, ಕೀಗಳನ್ನು ಎಂದಿಗೂ ಪರ್ಸ್ʼನಲ್ಲಿ ಇಡಬಾರದು. ಹೀಗೆ ಮಾಡಿದರೆ, ಬಡತನ ಬರುತ್ತದೆ. ಜೊತೆಗೆ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ.
ವಾಸ್ತುಶಾಸ್ತ್ರದ ಪ್ರಕಾರ, ಯಾರೂ ಹರಿದ ನೋಟುಗಳನ್ನು ಪರ್ಸ್ʼನಲ್ಲಿ ಇಡಬಾರದು. ನಿಮ್ಮ ಪರ್ಸ್ʼನಲ್ಲಿ ಈಗಾಗಲೇ ಹರಿದ ನೋಟು ಇದ್ದರೆ ಅದನ್ನು ಬದಲಾಯಿಸಿ. ಹರಿದ ಪರ್ಸ್ ಕೂಡ ಬಳಸಬಾರದು. ಹರಿದ ಪರ್ಸ್ ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎಂಬುದು ನಂಬಿಕೆ.
ವಾಸ್ತು ಪ್ರಕಾರ ಸಾಲ ಪಡೆದ ಹಣವನ್ನು ಪರ್ಸ್ʼನಲ್ಲಿ ಇಡಬಾರದು. ಎರವಲು ಪಡೆದ ಹಣವನ್ನು ಪರ್ಸ್ʼನಲ್ಲಿ ಇಡುವುದರಿಂದ ಸಾಲದ ಹೊರೆ ಹೆಚ್ಚಾಗುತ್ತದೆ ಮತ್ತು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಇಂತಹ ಹಣಗಳಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.