ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಳೆಯುವಂತೆ ಮಾಡಲು ಈ ತಪ್ಪುಗಳನ್ನು ಮಾಡಲೇಬೇಡಿ
ಕೆಲವರು ಸ್ಮಾರ್ಟ್‌ಫೋನ್ ಕ್ಯಾಮೆರಾದ ಮೂಲೆಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತೆಗೆಯಲು ಚೂಪಾದ ವಸ್ತುಗಳನ್ನು ಬಳಸುತ್ತಾರೆ. ಆದರೆ, ಇದರಿಂದ ನಿಮ್ಮ ಕ್ಯಾಮರಾದ ಲೆನ್ಸ್ ಸ್ಕ್ರಾಚ್ ಆಗಬಹುದು.
ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ಬಹಳ ಮುಖ್ಯ. ಅದರಲ್ಲೂ ಸೆಲ್ಫಿ ಕ್ಯಾಮೆರಾ ಪ್ರತಿಯೊಬ್ಬರಿಗೂ ಬಹಳ ಪ್ರಿಯ ಎಂದೇ ಹೇಳಬಹುದು. ಆದರೆ, ಸ್ಮಾರ್ಟ್‌ಫೋನ್‌ನ ಕ್ಯಾಮೆರಾವನ್ನು ಪದೇ ಪದೇ ಕ್ಲೀನ್ ಮಾಡುವುದು ಒಳ್ಳೆಯದಲ್ಲ. ಇದರಿಂದ ಕ್ಯಾಮೆರಾ ಗುಣಮಟ್ಟ ಹಾಳಾಗಬಹುದು.
ಸ್ಮಾರ್ಟ್‌ಫೋನ್‌ನಲ್ಲಿ ವಾಲ್ಯೂಮ್ ಬಟನ್ ಮತ್ತು ಅದರ ಪವರ್ ಬಟನ್ ಬಹಳ ಮುಖ್ಯ. ಅದನ್ನು ಸ್ವಚ್ಛಗೊಳಿಸಲು ಯಾವುದೇ ಕಾರಣಕ್ಕೂ ಕ್ಲೀನರ್ ಅನ್ನು ಬಳಸಲೇಬಾರದು.
ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸುವಾಗ ಅದರ ಚಾರ್ಜಿಂಗ್ ಪೋರ್ಟ್ ಬಗ್ಗೆ ವಿಶೇಷ ಗಮನಹರಿಸಿ. ಇಲ್ಲದಿದ್ದರೆ, ಅದು ಹಾನಿಗೊಳಗಾಗುತ್ತದೆ.
ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸುವಾಗ ಯಾವುದೇ ಒರಟಾದ ಬಟ್ಟೆಯನ್ನು ಬಳಸಬೇಡಿ. ಇದರಿಂದ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಹಾಳಾಗುತ್ತದೆ. ನೀವು ಯಾವಾಗಲು ಫೋನ್ ಡಿಸ್‌ಪ್ಲೇ ಸ್ವಚ್ಛಗೊಳಿಸುವಾಗ ಮೈಕ್ರೋಫೈಬರ್ ಬಟ್ಟೆಯನ್ನು ಮಾತ್ರ ಬಳಸಿ.