ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಲೇಬೇಡಿ

Fri, 14 Jul 2023-4:15 pm,

ಊಟ ಮಾಡಿದ ಕೂಡಲೇ ಕೆಲವರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ, ಇನ್ನೂ ಕೆಲವರಿಗೆ ಸಣ್ಣ ನಿದ್ರೆ ಮಾಡುವುದು ರೂಢಿಯಾಗಿರುತ್ತದೆ. ಆದರೆ, ಆರೋಗ್ಯದ ದೃಷಿಯಿಂದ ಇದು ಸರಿಯೇ ಎಂದು ಎಂದಾದರೂ ಯೋಚಿಸಿದ್ದೀರಾ? ವಾಸ್ತವವಾಗಿ ಊಟ ಮಾಡಿದ ಬಳಿಕ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. . ಅಂತಹ ತಪ್ಪುಗಳು ಯಾವುವೆಂದರೆ... 

ಕೆಲವರು ಊಟ ಮಾಡಿದ ಕೂಡಲೇ ನಿದ್ರೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.  ಮಾತ್ರವಲ್ಲ ಇದು ತೂಕ ಹೆಚ್ಚಲಕ್ಕೂ ಕಾರಣವಾಗುತ್ತದೆ. 

ನಮ್ಮಲ್ಲಿ ಕೆಲವರಿಗೆ ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡಿಯುವುದು ರೂಢಿ. ಆದರೆ, ಇದರಿಂದ ಆಸಿಡ್ ರಿಲೀಸ್ ಆಗಿ ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. 

ಊಟವಾದ ತಕ್ಷಣ ಸ್ನಾನ ಮಾಡುವುದರಿಂದ ಇದು ಜೀರ್ಣಾಗ್ನಿಗೆ ತೊಂದರೆ ಉಂಟುಮಾಡುತ್ತದೆ. 

ಊಟ ಮಾಡಿದ ಬಳಿಕ ಕೂಡಲೇ ವ್ಯಾಯಾಮ ಮಾಡುವುದರಿಂದ ಹೊಟ್ಟೆ ನೋವು, ವಾಂತಿ ಸೇರಿದಂತೆ ಉದರ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link