ಆನ್ ಲೈನ್ ನಲ್ಲಿ ಹಣ ಕಳುಹಿಸುವಾಗ ಈ ತಪ್ಪು ಆಗದಂತೆ ಎಚ್ಚರವಿರಲಿ, ಖಾಲಿಯಾಗಬಹುದು ಖಾತೆ
ನಾವು ಆನ್‌ಲೈನ್‌ನಲ್ಲಿ ಯಾರಿಗಾದರೂ ಹಣವನ್ನು ವರ್ಗಾಯಿಸಿದಾಗ, ಅದನ್ನು NIFT, IMPS ಮತ್ತು RTGS ನಂತಹ ಮಾಧ್ಯಮಗಳ ಮೂಲಕ ಕಳುಹಿಸುತ್ತೇವೆ. ಇದರಲ್ಲಿ, ನಾವು ಬ್ಯಾಂಕಿನ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು. ತುಂಬಿದ ಮಾಹಿತಿಯನ್ನು ಹಲವಾರು ಬಾರಿ ಪರಿಶೀಲಿಸಿಕೊಳ್ಳಿ. ಏಕೆಂದರೆ ದ ಹಣ ಕಡಿತಗೊಳ್ಳುತ್ತದೆ. ಆದರೆ ತಲುಪಬೇಕಾದ ವ್ಯಕ್ತಿಗೆ ಹಣ ತಲುಪಿರುವುದಿಲ್ಲ.
ಇಂದಿನ ಯುಗದಲ್ಲಿ ಎಲ್ಲರೂ ಮೊಬೈಲ್ ನಲ್ಲಿ ಬರುವ ಹಲವು ಬಗೆಯ ಆಪ್ ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಇವುಗಳಲ್ಲಿ ಮೊಬೈಲ್ ನಂಬರ್ ಮೂಲಕವೇ ಸುಲಭವಾಗಿ ಹಣ ವರ್ಗಾವಣೆಯಾಗುತ್ತದೆ. ಆದರೆ ಮೊಬೈಲ್ ಸಂಖ್ಯೆಯ ಒಂದು ಅಂಕೆ ತಪ್ಪಾಗಿದ್ದರೂ, ನಿಮ್ಮ ಹಣ ಬೇರೆಯವರ ಬ್ಯಾಂಕ್ ಖಾತೆಗೆ ತಲುಪಬಹುದು. ಆದ್ದರಿಂದ, ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ.
ಬ್ಯಾಂಕ್ ಖಾತೆ ಸಂಖ್ಯೆಯನ್ನು ತುಂಬುವಲ್ಲಿ ಜನರು ಹೆಚ್ಚಾಗಿ ತಪ್ಪು ಮಾಡುತ್ತಾರೆ. ಒಂದು ಸಂಖ್ಯೆಯೂ ತಪ್ಪಾದರೂ ಇಡೀ ಖಾತೆ ಸಂಖ್ಯೆಯೇ ತಪ್ಪಾಗಿ ಬಿಡುತ್ತದೆ.
ಪ್ರತಿಯೊಂದು ಬ್ಯಾಂಕ್ ಶಾಖೆಯು ತನ್ನದೇ ಆದ IFSC ಕೋಡ್ ಅನ್ನು ಹೊಂದಿರುತ್ತದೆ. ಈ ಕೋಡ್ ಮೂಲಕ ಶಾಖೆಯನ್ನು ಗುರುತಿಸಬಹುದು. ನಾವು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಯಾರಿಗಾದರೂ ಹಣವನ್ನು ವರ್ಗಾಯಿಸಬೇಕಲಾದರೆ ಈ ಕೋಡ್ ನ ಅಗತ್ಯವಿರುತ್ತದೆ. ಈ ಕೋಡ್ ತಪ್ಪಾಗಿದ್ದರೂ ಹಣ ಯಾವುದೋ ಖಾತೆಗೆ ವರ್ಗಾವಣೆಯಾಗಬಹುದು.