ನೀವೂ ಮಾರ್ನಿಂಗ್ ವಾಕ್ ಮಾಡ್ತೀರಾ? ಹಾಗಿದ್ರೆ ಅಪ್ಪಿತಪ್ಪಿಯೂ 5 ತಪ್ಪುಗಳನ್ನು ಮಾಡಬೇಡಿ
ಮುಂಜಾನೆ ನಡಿಗೆ ಎಂದರೆ ಮಾರ್ನಿಂಗ್ ವಾಕ್ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ, ಬೆಳಗಿನ ನಡಿಗೆಗೂ ಮುನ್ನ ನೀವು ಕೆಲವು ತಪ್ಪುಗಳನ್ನು ಮಾಡದಂತೆ ನಿಗಾವಹಿಸುವುದು ಅತ್ಯಗತ್ಯ. ಇಲ್ಲದಿದ್ದರೆ, ಇದು ನಿಮಗೆ ಲಾಭದ ಬದಲಿಗೆ ನಷ್ಟವನ್ನು ಉಂಟು ಮಾಡಬಹುದು. ಹಾಗಿದ್ದರೆ, ಮಾರ್ನಿಂಗ್ ವಾಕ್ ಮಾಡುವ ಮುನ್ನ ಈ ತಪ್ಪುಗಳಾಗದಂತೆ ನಿಗಾವಹಿಸಿ.
ಆಹಾರ ಸೇವನೆ: ನೀವು ಮಾರ್ನಿಂಗ್ ವಾಕ್ ಮಾಡುವ ಮೊದಲು ಯಾವುದೇ ಕಾರಣಕ್ಕೂ ಭಾರೀ ಆಹಾರಗಳನ್ನು ಸೇವಿಸಲೇಬಾರದು. ಆಹಾರ ಸೇವಿಸಿದ ಬಳಿಕ ವಾಕ್ ಮಾಡಿದರೆ ದೇಹಕ್ಕೆ ಬೇಗ ಸುಸ್ತಾಗುತ್ತದೆ.
ಶೂಗಳ ಆಯ್ಕೆ: ಕೆಲವರು ನಿತ್ಯ ಮುಂಜಾನೆ ನಡಿಗೆ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಕೆಲವರು ಚಪ್ಪಲಿ ಧರಿಸಿ ವಾಕ್ ಮಾಡಿದರೆ, ಇನ್ನೂ ಕೆಲವರು ಸರಿಯಾದ ಶೂ ಆಯ್ಕೆಮಾಡುವಲ್ಲಿ ಎಡವುತ್ತಾರೆ. ಆದರಿದು ನಿಮ್ಮ ಕಾಲುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ನೀರು: ಉತ್ತಮ ಆರೋಗ್ಯಕ್ಕೆ ನೀರು ಬಹಳ ಮುಖ್ಯ. ಕೆಲವರು ನೀರನ್ನೂ ಕುಡಿಯದೆ ವಾಕ್ ಮಾಡುತ್ತಾರೆ. ಆದರೆ, ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳಲು ನೀವು ಮುಂಜಾನೆ ವಾಕ್ ಹೋಗುವ ಕನಿಷ್ಠ ಅರ್ಧಗಂಟೆ ಮೊದಲು ನೀರು ಕುಡಿಯಿರಿ.
ಇಂತಹವರಿಗೆ ಮಾರ್ನಿಂಗ್ ವಾಕ್ ಒಳ್ಳೆಯದಲ್ಲ: ವೈದ್ಯರ ಪ್ರಕಾರ, ಆಸ್ತಮಾ ರೋಗಿಗಳಿಗೆ ಮಾರ್ನಿಂಗ್ ವಾಕ್ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ನೀವು ಆಸ್ತಮಾ ರೋಗಿಗಳಾಗಿದ್ದರೆ ಮುಂಜಾನೆ ಶೀತದ ವಾತಾವರಣದಲ್ಲಿ ವಾಕ್ ಮಾಡುವುದನ್ನು ತಪ್ಪಿಸಿ. ಬದಲಿಗೆ ಸಂಜೆ ನಾಲ್ಕೈದು ಗಂಟೆ ಬಳಿಕ ವಾಕ್ ಹೋಗುವುದನ್ನು ಪರಿಗಣಿಸಿ.
ವಾರ್ಮ್ ಅಪ್: ನಮ್ಮಲ್ಲಿ ಬಹಳಷ್ಟು ಮಂದಿ ವಾರ್ಮ್ ಅಪ್ ಮಾಡದೆಯೇ ವಾಕ್ ಮಾಡುತ್ತಾರೆ. ಆದರೆ, ನೀವು ಸಣ್ಣಗಾಗಲು ಬಯಸಿದರೆ, ದೇಹದಲ್ಲಿ ಕ್ಯಾಲೋರಿಗಳನ್ನು ಕಡಿಮೆ ಮಾಡಲು ಬಯಸಿದರೆ ವಾರ್ಮ್ ಅಪ್ ಮಾಡದೆಯೇ ವಾಕ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.