ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ `ಐದು` ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!

Fri, 30 Aug 2024-11:08 am,

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಏನೇ ಡೌಟ್ ಇದ್ರೂ ಎಲ್ಲಾದಕ್ಕೂ ಗೂಗಲ್‌ನಲ್ಲಿ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು. ಇದಕ್ಕಾಗಿಯೇ ಗೂಗಲ್ ಅನ್ನು ಶಕ್ತಿಶಾಲಿ ಸರ್ಚ್ ಎಂಜಿನ್ ಎಂತಲೇ ಕರೆಯಲಾಗುತ್ತದೆ. ಆದರೆ, ಗೂಗಲ್‌ನಲ್ಲಿ  ಕೆಲವು ವಿಷಯಗಳನ್ನು ಸರ್ಚ್ ಮಾಡುವುದರಿಂದ ಜೈಲು ಪಾಲಾಗಬಹುದು ಎಂದು ನಿಮಗೆ ತಿಳಿದಿದೆಯೇ?

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದೊಮ್ಮೆ ಅಪ್ಪಿತಪ್ಪಿ ಇಂತಹ ಸಾಹಸಕ್ಕೆ ಕೈ ಹಾಕಿದರೆ ಅಂತಹವಾರು ಜೈಲು ಸೇರೋದು ಗ್ಯಾರಂಟಿ. ಅಂತಹ ಐದು ವಿಷಯಗಳು ಯಾವುವೆಂದರೆ... 

ಡ್ರಗ್ ಉತ್ಪಾದನೆ ಅಥವಾ ಯಾವುದೇ ಇತರ ಕ್ರಿಮಿನಲ್ ಕೃತ್ಯಗಳಂತಹ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಮಾಹಿತಿಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.  

ಚೈಲ್ಡ್ ಪ್ರೋನೋಗ್ರಫಿ ಒಂದು ತುಂಬಾ ಗಂಭೀರ ವಿಚಾರವಾಗಿದೆ. ಐಟಿ ಕಾಯಿದೆಯ ಪ್ರಕಾರ, ಗೂಗಲ್‌ನಲ್ಲಿ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಮಾಹಿತಿ ಸರ್ಚ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗಾಗಿ, ಇಂತಹ ವಿಷಯಗಳನ್ನು ಸರ್ಚ್ ಮಾಡುವುದರಿಂದ ಜೈಲು ಕಂಬಿ ಎಣಿಸಬೇಕಾಗಬಹುದು. 

ಕೆಲವರು ಬಾಂಬ್ ತಯಾರಿಕೆಯಂತಹ ಸೂಕ್ಷ್ಮ ವಿಚಾರದ ಬಗ್ಗೆಯೂ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ, ದೇಶದ ಭದ್ರತೆಗೆ ಆತಂಕ ತಂದೊಡ್ಡುವ ಇಂತಹ ವಿಚಾರಗಳನ್ನು ಗೂಗಲ್‌ನಲ್ಲಿ ಹುಡುಕುವುದು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು. 

ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಇದೂ ಸಹ ನಿಮಗೆ ಜೈಲಿನ ಹಾದಿ ತೋರಿಸಬಹುದು. ಏಕೆಂದರೆ, ಸರ್ಕಾರ ದೇಶದ ಭದ್ರತೆ ದೃಷ್ಟಿಯಿಂದ ಇಂತಹ ವಿಚಾರಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುತ್ತದೆ. 

ಗೂಗಲ್‌ನಲ್ಲಿ  ಹ್ಯಾಕಿಂಕ್ ತಂತ್ರಗಳ ಕುರಿತು ಹುಡುಕಾಟ ನಡೆಸುವುದು ಕೂಡ ಗಂಭೀರವಾದ ಅಪರಾದವಾಗಿದೆ. ಒಂದೊಮ್ಮೆ ಇಂತಹ ವಿಚಾರಗಳನ್ನು ಸರ್ಚ್ ಮಾಡಿದ್ದೇ ಆದಲ್ಲಿ ಜೈಲು ಸೇರುವುದು ಗ್ಯಾರಂಟಿ.   

ವಾಸ್ತವವಾಗಿ, ಗೂಗಲ್ ಉತ್ತಮ ಜ್ಞಾನ ಭಂಡಾರವಾಗಿದ್ದು, ನಮ್ಮ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸಿದೆ. ಹಾಗಾಗಿ  ಕೆಟ್ಟ ಕೆಲಸಗಳಿಗೆ ಗೂಗಲ್ ಬಳಸುವ ಬದಲಿಗೆ, ಸಾಧ್ಯವಾದಷ್ಟು ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ ಸಾಧಿಸಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link