ಆಗಸ್ಟ್ 16ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿ, ತಾಯಿ ಲಕ್ಷ್ಮಿ ನೇರ ಬಂದು ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ!

Wed, 02 Aug 2023-5:09 pm,

ಉತ್ತರ ಭಾರತದ ಹಿಂದೂ ಪಂಚಾಂಗದ ಪ್ರಕಾರ, ಈ ಬಾರಿ  ಶ್ರಾವಣ ಮತ್ತು ಅಧಿಕ ಮಾಸ ಒಟ್ಟಿಗೆ ಬಂದಿಗೆ. ಇಂತಹ ಸಂದರ್ಭದಲ್ಲಿ ಶಿವನ ಜೊತೆಗೆ ವಿಷ್ಣುವಿನ ಆಶೀರ್ವಾದ ಪಡೆಯುವ ಸುವರ್ಣಾವಕಾಶ ಒದಗಿ ಬರುತ್ತಿದೆ. ಅಧಿಕ ಮಾಸ ಜುಲೈ 18 ರಿಂದ ಆರಂಭಗೊಂಡಿದೆ ಮತ್ತು ಆಗಸ್ಟ್ 16 ರವರೆಗೆ ಇರಲಿದೆ.  ಈ ಅವಧಿಯಲ್ಲಿ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಕೆಲ ಉಪಾಯಗಳನ್ನು ಕೈಗೊಳ್ಳುವುದು ಭವಿಷ್ಯದಲ್ಲಿ ಸಾಕಷ್ಟು ಆರ್ಥಿಕ ಲಾಭವನ್ನು ನೀಡಲಿದೆ. ಇದಲ್ಲದೆ ಈ ಕ್ರಮಗಳ ಮನೆಯಲ್ಲಿ ಶುಖ ಸಮೃದ್ಧಿಯನ್ನು ಕೂಡ ತರುತ್ತವೆ. ಈ ಮಾಸದಲ್ಲಿ ಬರುವ ಏಕಾದಶಿಗೂ ಕೂಡ ವಿಶೇಷ ಮಹತ್ವವಿರುತ್ತದೆ.   

ಅಧಿಕ ಮಾಸದಲ್ಲಿ ಬರುವ ಏಕಾದಶಿಯ ಉಪವಾಸವನ್ನು 3 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಧಿಕಮಾಸ ಏಕಾದಶಿಯ ದಿನದಂದು ಅಶ್ವತ್ಥ ಮರಕ್ಕೆ ನೀರು ಮತ್ತು ಹಾಲನ್ನು ಅರ್ಪಿಸಿ. ಸಂಜೆ ದೀಪವನ್ನು ಹಚ್ಚುವ ಮೂಲಕ ಈ ಮಂತ್ರವನ್ನು ಪಠಿಸುವುದರಿಂದ, ಶ್ರೀ ಹರಿಯೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಪ್ರಾಪ್ತಿಯಾಗುತ್ತದೆ. ಮಂತ್ರ-ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ. ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇನಾಮಃ  ಆಯು: ಪ್ರಜಾಂ ಧನಂ ಧಾನ್ಯಮ್, ಸೌಭಾಗ್ಯಂ ಸರ್ವಸಂಪದಮ್. ದೇಹಿ ದೇವ್ ಮಹಾವೃಕ್ಷ ತ್ವಾಮಹಂ ಶರಣಂ ಗತ್:  

ಅಧಿಕಮಾಸದಲ್ಲಿ ಮಾಡುವ ಈ ಪರಿಹಾರವು ಹಣದ ಕೊರತೆಯನ್ನು ನೀಗಿಸುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯು ಹಣವನ್ನು ಪಡೆಯುತ್ತಾನೆ ಮತ್ತು ಕ್ರಮೇಣ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಪೂರ್ವಜರ ಆಶೀರ್ವಾದದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.  

ಈ ಮಾಸದಲ್ಲಿ ತೀರ್ಥಸ್ನಾನ ಮಾಡುವುದರಿಂದ ಆರೋಗ್ಯ ಮತ್ತು ಅಮೃತ ಸಿಗುತ್ತದೆ ಎಂಬ ನಂಬಿಕೆ ಇದೆ. ಇದರೊಂದಿಗೆ ಅಧಿಕಮಾಸದ ಉಳಿದ ದಿನಗಳಲ್ಲಿ ತೀರ್ಥಕ್ಷೇತ್ರದಲ್ಲಿರುವ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.  

ನಿಮ್ಮ ಮನೆಯಲ್ಲಿ ತೊಂದರೆಗಳಿದ್ದರೆ, ಕುಟುಂಬದ ಸಂತೋಷ ಮತ್ತು ಶಾಂತಿ ಇತ್ಯಾದಿಗಳ ಮೇಲೆ ಯಾರೊಬ್ಬರ ಕಣ್ಣು ಬಿದ್ದಿದ್ದರೆ, ಆಗ ಅಧಿಕ ಮಾಸದಲ್ಲಿ ದೇವಸ್ಥಾನಕ್ಕೆ ಹೋಗಿ ಧ್ವಜವನ್ನು ದಾನ ಮಾಡುವುದು ಲಾಭದಾಯಕವಾಗಿದೆ. ಇದರೊಂದಿಗೆ ದೀಪ ದಾನವನ್ನೂ ಮಾಡಿ. ಇದು ಮಾನಸಿಕ, ದೈಹಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತದೆ.  

ಈ ಮಾಸದಲ್ಲಿ ಅನ್ನ, ಧನ, ವಸ್ತ್ರ ಇತ್ಯಾದಿಗಳನ್ನು ದಾನ ಮಾಡುವುದು ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಇದು ಎಂದಿಗೂ ಅಂತ್ಯವಿಲ್ಲದ ಪುಣ್ಯ ಫಲವನ್ನು ನೀಡುತ್ತದೆ. ಅಷ್ಟೇ ಅಲ್ಲ, ದುಃಖ ಮತ್ತು ಬಡತನದಿಂದ ಮುಕ್ತಿ ಸಿಗುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link