ಪ್ರಯಾಣದ ವೇಳೆ ವಾಮಿಟಿಂಗ್ ಸಮಸ್ಯೆಯೇ? ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿರಲಿ ಈ ವಸ್ತುಗಳು
ನಿಮಗೂ ಟ್ರಾವೆಲ್ ಮಾಡುವಾಗ ವಾಂತಿ ಬರುತ್ತಾ? ಇದನ್ನು ತಪ್ಪಿಸಲು ನೀವು ಎಲ್ಲಾದರೂ ಪ್ರಯಾಣ ಮಾಡುವಾಗ ಕೆಲವು ವಸ್ತುಗಳನ್ನು ಮರೆಯದೇ ನಿಮ್ಮ ಟ್ರಾವೆಲ್ ಬ್ಯಾಗ್‌ನಲ್ಲಿ ಕೊಂಡೊಯ್ಯಿರಿ. ಇದರಿಂದ ನೀವು ವಾಕರಿಕೆ, ವಾಂತಿ ಸಮಸ್ಯೆಗೆ ಗುಡ್ ಬೈ ಹೇಳಿ.
ಪುದೀನ ಎಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಪ್ರಯಾಣದ ವೇಳೆ ವಾಕರಿಕೆ-ವಾಂತಿ ಬರುವಂತೆ ಭಾಸವಾಗುತ್ತಿದ್ದರೆ ಇದರ ಒಂದೆರಡು ದಳವನ್ನು ತಿನ್ನಿರಿ. ಇದು ನಿಮ್ಮ ವಾಂತಿ-ವಾಕರಿಕೆಯಂತಹ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲದು.
ಆರೋಗ್ಯ ವರ್ಧಕವಗಿರುವ ನಿಂಬೆಹಣ್ಣು ಸಹ ವಾಕರಿಕೆ, ವಾಂತಿ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು. ಇದಕ್ಕಾಗಿ ನೀವು ಪ್ರಯಾಣ ಮಾಡುವಾಗ ನಿಂಬೆ ಹಣ್ಣಿನ ಶರಬತ್ತನ್ನು ಸೇವಿಸಿ.
ಶುಂಠಿಯೂ ಸಹ ವಾಂತಿ ಮತ್ತು ವಾಕರಿಕೆ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಪ್ರಯಾಣದ ಸಮಯದಲ್ಲಿ ಶುಂಠಿ ಕ್ಯಾಂಡಿ, ಶುಂಠಿ ಚಹಾ ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.
ಏಲಕ್ಕಿ ಬಾಳೆಯನ್ನು ಆರೋಗ್ಯದ ಗಣಿ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಏಲಕ್ಕಿ ಬಾಳೆಹಣ್ಣನ್ನು ತಿನ್ನುವುದರಿಂದಲೂ ಸಹ ವಾಕರಿ,ಕೆ, ವಾಂತಿ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.