ನಿತ್ಯ ಅನ್ನವನ್ನೇ ತಿನ್ನುವ ಅಭ್ಯಾಸ ನಿಮಗೂ ಇದ್ದರೆ ಇಂದೇ ಬದಲಾಯಿಸಿಕೊಳ್ಳಿ
ಬಿಳಿ ಅಕ್ಕಿಯಲ್ಲಿ ನಾರಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಇದನ್ನು ಅತಿಯಾಗಿ ತಿನ್ನುವುದರಿಂದ ಜೀರ್ಣಕಾರಿ ಶಕ್ತಿ ಕುಂಠಿತವಾಗುತ್ತದೆ ಮತ್ತು ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು.
ಅನ್ನದಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಸಿಗುವುದಿಲ್ಲ. ಇದರಲ್ಲಿ ಕಡಿಮೆ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಮೂಳೆಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಿಳಿ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ಅನ್ನವನ್ನು ಪ್ರತಿದಿನ ಅಥವಾ ಅತಿಯಾಗಿ ಸೇವಿಸಿದರೆ, ಅದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಕ್ಯಾಲೋರಿ ಅಂಶವನ್ನು ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ಸೇವಿಸುವುದರಿಂದ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಈಗಾಗಲೇ ಮಧುಮೇಹ ಸಮಸ್ಯೆ ಇದ್ದರೆ ಬಿಳಿ ಅನ್ನವನ್ನು ತಿನ್ನಬೇಡಿ. ಬಿಳಿ ಅನ್ನಕ್ಕಿಂತ ಬ್ರೌನ್ ರೈಸ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.
ಬೇಯಿಸಿದ ಅನ್ನದಲ್ಲಿ ಹೆಚ್ಚಿನ ಕೊಬ್ಬಿನಂಶವಿರುತ್ತದೆ. ಇದನ್ನು ಅತಿಯಾಗಿ ತಿಂದರೆ ಬೊಜ್ಜಿನ ಸಮಸ್ಯೆ ಎದುರಾಗಬಹುದು. ಈಗಾಗಲೇ ಸ್ಥೂಲಕಾಯತೆಯ ಸಮಸ್ಯೆ ಇದ್ದರೆ, ಅನ್ನವನ್ನುಕಡಿಮೆ ಪ್ರಮಾಣದಲ್ಲಿ ಸೇವಿಸಿ.
ಅನ್ನ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ. ಇದನ್ನು ತಿಂದರೆ ಮತ್ತೆ ಮತ್ತೆ ಹಸಿವಾಗುತ್ತದೆ ಮತ್ತು ಹೆಚ್ಚು ತಿನ್ನುತ್ತೀರಿ.