ಅನ್ನದ ಬಗ್ಗೆ ನಿಮಗೂ ಈ ತಪ್ಪು ಕಲ್ಪನೆಗಳಿವೆಯೇ? ಉತ್ತಮ ಆರೋಗ್ಯಕ್ಕೆ ಯಾವ ಅಕ್ಕಿ ಬೆಸ್ಟ್?
ಅನ್ನದಲ್ಲಿ ಪ್ರೊಟೀನ್ ಇರುವುದಿಲ್ಲ. ಆರೋಗ್ಯಕ್ಕೆ ಅನ್ನ ಒಳ್ಳೆಯದಲ್ಲ, ರಾತ್ರಿ ವೇಳೆ ಅನ್ನ ಸೇವಿಸುವುದರಿಂದ ದಪ್ಪ ಆಗ್ತಾರೆ, ಅನ್ನ ಸೇವಿಸುವುದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ ಎಂಬಿತ್ಯಾದಿ ತಪ್ಪು ಕಲ್ಪನೆಗಳು ಬಹುತೇಕ ಜನರ ಮನಸ್ಸಿನಲ್ಲಿದೆ. ಆದರೆ, ನಿಜಕ್ಕೂ ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ವಾ? ಈ ಬಗ್ಗೆ ಆಯುರ್ವೇದ ಏನು ಹೇಳುತ್ತೇ ಎಂದು ತಿಳಿಯಿರಿ.
ಆಯುರ್ವೇದದಲ್ಲಿ ಶಾಲಿ ಎಂದರೆ ಅನ್ನವನ್ನು ನಿತ್ಯ ಸೇವನೀಯ. ದಿನದ ಮೂರು ಸಮಯವೂ ಅನ್ನವನ್ನು ಸೇವಿಸಬಹುದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಅನ್ನ ಸೇವಿಸುವುದರಿಂದ ಆರೋಗ್ಯವಾಗಿರಬಹುದು ಎಂತಲೂ ಹೇಳಲಾಗುತ್ತದೆ. ಆದರೆ, ಅನ್ನದ ಗುಣ ಏನು? ಯಾವ ರೀತಿಯ ಅಕ್ಕಿ ಸೇವಿಸಬೇಕು? ಎಂಬುದರ ಬಗ್ಗೆ ಗಮನವಿಡಬೇಕು.
ಅನ್ನದ ಗುಣವೇನೆಂದರೆ ಅದು ಬಹಳ ಬೇಗ ಜೀರ್ಣವಾಗಿ ಬಿಡುತ್ತದೆ. ಆದರೆ, ಅನ್ನ ತಿನ್ನುವುದರಿಂದ ಶುಗರ್ ಹೆಚ್ಚಾಗಲ್ಲ. ಆದರೆ, ಅಕ್ಕಿಯ ಆಯ್ಕೆಯಲ್ಲಿ ಹುಷಾರಾಗಿರಬೇಕು ಎಂದು ಹೇಳಲಾಗುತ್ತದೆ.
ನಾವು ತಿನ್ನುವ ಅಕ್ಕಿ ಕನಿಷ್ಠ ಒಂದು ವರ್ಷ ಹಳೆಯದಾಗಿದ್ದರೆ ಮಾತ್ರ ಆ ಅಕ್ಕಿಗೆ ಸಕ್ಕರೆ ಅಂಶವನ್ನು ಹೆಚ್ಚಿಸುವ ಗುಣ ಇರುವುದಿಲ್ಲ ಹಾಗಾಗಿ, ಅದು ಆರೋಗ್ಯವನ್ನು ವೃದ್ಧಿಸುತ್ತದೆ.
ಆಯುರ್ವೇದದ ಪ್ರಕಾರ, ಅಕ್ಕಿಗಳಲ್ಲೆಲ್ಲಾ ಶ್ರೇಷ್ಠ ಅಕ್ಕಿ ಕೆಂಪು ಅಕ್ಕಿ ಎಂದು ಹೇಳಲಾಗುತ್ತದೆ. ಕೆಂಪು ಅಕ್ಕಿಯನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ ಎಂದು ಹೇಳಲಾಗುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ವೇಳೆ ಅನ್ನ ತಿನ್ನುವುದರಿಂದ ದಪ್ಪ ಆಗಲ್ಲ. ಆದರೆ, ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬ ಬಗ್ಗೆ ನಮಗೆ ಅರಿವಿರುವುದು ಬಹಳ ಮುಖ್ಯ. ಮಾತ್ರವಲ್ಲ, ನೀವು ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ಅನ್ನವನ್ನು ಸೇವಿಸಬೇಕು ಎಂಬುದನ್ನು ನೆನಪಿಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.