ನಿಮಗೂ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿದೆಯೇ? ಇವು ಕಾರಣವಾಗಿರಬಹುದು
ಒತ್ತಡ: ಈಗಿನ ಒತ್ತಡದ ಜೀವನ ಶೈಲಿಯಲ್ಲಿ ತಲೆನೋವು ಸರ್ವೇ ಸಾಮಾನ್ಯ. ನಿಮಗೆ ಒತ್ತಡದಿಂದಾಗಿ ತಲೆನೋವು ಬರುತ್ತಿದ್ದರೆ ಅದನ್ನು ನಿವಾರಿಸಲು ಯೋಗ, ಪ್ರಾಣಾಯಾಮವನ್ನು ರೂಢಿಸಿಕೊಳ್ಳಿ.
ದೃಷ್ಟಿ ದೋಷ: ಕಣ್ಣಿನ ದೃಷ್ಟಿದೋಷವೂ ಕೂಡ ತಲೆನೊವಿಗೆ ಕಾರಣವಾಗಿರಬಹುದು.
ನಿದ್ರಾಹೀನತೆ: ನಾವು ಆರೋಗ್ಯವಾಗಿರಲು ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ. ನಿತ್ಯ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕವಾಗಿದೆ. ಆದರೆ, ಸರಿಯಾಗಿ ನಿದ್ರೆ ಮಾಡದಿದ್ದರೆ ಅದು ತಲೆನೋವಿಗೆ ಕಾರಣವಾಗಬಹುದು. ನಿದ್ರೆಯ ಕೊರತೆಯು ತಲೆನೋವಿಗೆ ಮಾತ್ರವಲ್ಲ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ಸಹ ಉಂಟು ಮಾಡಬಹುದು.
ರಕ್ತಹೀನತೆ: ದೇಹದಲ್ಲಿ ಹಿಮೊಗ್ಲೋಬಿನ ಕಡಿಮ ಆದಾಗಲೂ ಸಹ ಬೆಳಿಗ್ಗೆ ಎದ್ದ ತಕ್ಷಣ ತಲೆನೋವಿನ ಸಮಸ್ಯೆ ಕಾಡಬಹುದು. ಹಾಗಾಗಿ ಪದೇ ಪದೇ ತಲೆನೋವು ಬರುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ.
ನಿರ್ಜಲೀಕರಣ: ದೇಹದಲ್ಲಿ ನೀರಿನ ಕೊರತೆ ಉಂಟಾದರೂ ಸಹ ಬೆಳಿಗ್ಗೆ ಸಮಯದಲ್ಲಿ ತಲೆ ನೋವು ನಿಮ್ಮನ್ನು ಕಾಡಬಹುದು. ಇದನ್ನು ತಪ್ಪಿಸಲು ನಿತ್ಯ ಬೆಳಿಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ಮನೆಮದ್ದುಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.